ಚುನಾವಣೆ ಮತ್ತು ಉಪಚುನಾವಣೆ : ಸಂಗ್ರಹವಾದ ಹಣದ ಮೊತ್ತ ಎಷ್ಟು ಗೊತ್ತಾ….!

ನವದೆಹಲಿ:

    ಜಾರ್ಖಂಡ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ್ತು ವಿವಿಧ ಉಪಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ 1,082 ಕೋಟಿ ರೂಪಾಯಿ ಗಡಿ ದಾಟಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ. 

   ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ 2019 ರ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಉಭಯ ರಾಜ್ಯಗಳಲ್ಲಿ ಏಳು ಪಟ್ಟು ಅಕ್ರಮ ವಸ್ತುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

   ಒಟ್ಟಾರೆ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಿಂದ 858 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

   2019 ರ ವಿಧಾನಸಭಾ ಚುನಾವಣೆಯಲ್ಲಿ, ಮಹಾರಾಷ್ಟ್ರವು 103.61 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ನಗದನ್ನು ವಶಪಡಿಸಿಕೊಂಡರೆ, ಜಾರ್ಖಂಡ್‌ನಲ್ಲಿ ಅದು 18.76 ಕೋಟಿ ರೂಪಾಯಿ ಮೌಲ್ಯದ, ನಗದು, ಮದ್ಯ, ಡ್ರಗ್ಸ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

   ಜಾರಿ ಏಜೆನ್ಸಿಗಳು ನಡೆಸಿದ ಕೆಲವು ಕಾರ್ಯಾಚರಣೆಗಳಲ್ಲಿ ಪಾಲ್ಘರ್ ಜಿಲ್ಲೆಯ ವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀಪ್‌ನಿಂದ 3.70 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಬುಲ್ಧಾನಾ ಜಿಲ್ಲೆಯ ಮತ್ತೊಂದು ಘಟನೆಯಲ್ಲಿ, 4.51 ಕೋಟಿ ಮೌಲ್ಯದ 4,500 ಕೆಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ ರಾಯಗಡದಲ್ಲಿ 5.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Recent Articles

spot_img

Related Stories

Share via
Copy link