ಹೈದರಾಬಾದ್
ಆಂಧ್ರಪ್ರದೇಶ ರಾಜ್ಯದ ವಿಭಜನೆಯಾದ ಬಳಿಕ ಹೈದರಾಬಾದ್ ಗೆ ನೀಡಲಾಗಿದ್ದ ತೆಲಂಗಾಣ- ಆಂಧ್ರದ ಜಂಟಿ ರಾಜಧಾನಿ ಸ್ಥಾನ ಇಂದಿನಿಂದ ಕೊನೆಗೊಳ್ಳಲಿದೆ. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ 2014 ಪ್ರಕಾರ, ಹೈದರಾಬಾದ್ ತೆಲಂಗಾಣ- ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕೆಂಬ ನಿಬಂಧನೆ ಇತ್ತು.
ಜೂ.02, 2024 ರಿಂದ ಹೈದರಾಬಾದ್ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿರಲಿದೆ. ಆಂಧ್ರ-ತೆಲಂಗಾಣವನ್ನು 2014 ರಲ್ಲಿ ಪ್ರತ್ಯೇಕಗೊಳಿಸಲಾಗಿತ್ತು.ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿ ಈ ವೇಳೆಗೆ ಸೃಷ್ಟಿಯಾಗಬೇಕಿತ್ತಾದರೂ ಅಲ್ಲಿ ಮೂರು ರಾಜಧಾನಿಗಳನ್ನಿಟ್ಟುಕೊಂಡು ರಾಜ್ಯ ಅಸ್ಥಿರತೆ ಎದುರಿಸುತ್ತಿದೆ.