ಬೆಂಗಳೂರು:
ತುಮಕೂರಿಗೆ ನೂತನ ಡಿಸಿಯಾಗಿ ಕೆ ಶ್ರೀನಿವಾಸ್
ಪ್ರತಿಬಾರಿ ರಾಜ್ಯ ಸರ್ಕಾರ ಬದಲಾದ ಸಂದರ್ಭದಲ್ಲೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ಗ್ಯಾರಂಟಿ. ಈಗಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತಿದ್ದಂತೆ ವರ್ಗಾವಣೆ ಪರ್ವ ಶುರುವಾಗಿದೆ. 10 ದಿನಗಳ ಹಿಂದಷ್ಟೇ 11 ಐಎಎಸ್ ಅಧಿಕಾರಿಗಳನ್ನ ಟ್ರಾನ್ಸ್‌ಫರ್ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ಮತ್ತೆ 10 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ ಅಧಿಕಾರಿಗಳ ಬದಲಾವಣೆ ಮುಂದುವರಿದಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಮತ್ತಷ್ಟು ಹುರುಪು ನೀಡಲು ರಾಜ್ಯಸರ್ಕಾರ ಮುಂದಾಗಿದೆ. 10 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ (Karnataka government) ಆದೇಶ ಹೊರಡಿಸಿದೆ.
ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಿಗಳನ್ನು ಇಂದು ವರ್ಗಾವಣೆ ಮಾಡಿದೆ. ಹಾಗಾದ್ರೆ ಯಾವೆಲ್ಲಾ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ, ಯಾವ ಇಲಾಖೆ ನೀಡಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
1). ಪಿ.ಎನ್.ರವೀಂದ್ರ, ಡಿಸಿ ಚಿಕ್ಕಬಳ್ಳಾಪುರ
2). ಕೆ.ಶ್ರೀನಿವಾಸ್, ಡಿಸಿ ತುಮಕೂರು
3). ಕೆ.ಎಂ.ಜಾನಕಿ, ಡಿಸಿ ಬಾಗಲಕೋಟೆ
4). ಮುಲ್ಲೈ ಮುಹಿಲನ್, ಡಿಸಿ ದಕ್ಷಿಣ ಕನ್ನಡ
5). ಡಾ.ಕುಮಾರ, ಡಿಸಿ ಮಂಡ್ಯ
6). ಪಲ್ಲವಿ ಆಕುರಾತಿ, ಹೆಚ್ಚುವರಿ ಯೋಜನಾ ನಿರ್ದೇಶಕಿ & ಸಕಾಲ ಮಿಷನ್
7). ಡಾ. ಎಂ.ವಿ.ವೆಂಕಟೇಶ್, ಪಶುಸಂಗೋಪನಾ ಇಲಾಖೆ ಆಯುಕ್ತ
8). ಎ.ಎಂ.ಯೋಗೇಶ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ
9). ಜಿ.ಪ್ರಭು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ
10). ನವೀನ್ ಕುಮಾರ್ ರಾಜು, ವಸತಿ ಶಿಕ್ಷಣ ಸೊಸೈಟಿ ಇಡಿ
ಪಿ.ಎನ್.ರವೀಂದ್ರ ಅವರನ್ನ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ, ಕೆ.ಶ್ರೀನಿವಾಸ್ ಅವ್ರನ್ನ ತುಮಕೂರು ಜಿಲ್ಲಾಧಿಕಾರಿಯಾಗಿ, ಕೆ.ಎಂ.ಜಾನಕಿ ಅವರನ್ನ ಬಾಗಲಕೋಟೆ ಜಿಲ್ಲಾಧಿಕಾರಿ ಆಗಿ, ಮುಲ್ಲೈ ಮುಹಿಲನ್ ಅವರನ್ನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹಾಗೂ ಮಂಡ್ಯ ಡಿಸಿ ಆಗಿ ಡಾ.ಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದೆ. ಹಾಗೇ ಪಲ್ಲವಿ ಆಕುರಾತಿ ಅವರನ್ನು ಹೆಚ್ಚುವರಿ ಯೋಜನಾ ನಿರ್ದೇಶಕಿ ಹಾಗೂ ಸಕಾಲ ಮಿಷನ್‌ಗೆ ವರ್ಗಾವಣೆ ಮಾಡಲಾಗಿದೆ.
ಡಾ. ಎಂ.ವಿ. ವೆಂಕಟೇಶ್ ಅವರನ್ನು ಪಶುಸಂಗೋಪನಾ ಇಲಾಖೆಯ ಆಯುಕ್ತರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ. ಇನ್ನುಳಿದಂತೆ ಎ.ಎಂ.ಯೋಗೇಶ್ ಅವರನ್ನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾಗಿ. ಜಿ.ಪ್ರಭು ಅವರನ್ನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರಾಗಿ ಮತ್ತು ನವೀನ್ ಕುಮಾರ್ ರಾಜುರನ್ನ ವಸತಿ ಶಿಕ್ಷಣ ಸೊಸೈಟಿ ಇಡಿ ಆಗಿ ಟ್ರಾನ್ಸ್‌ಫರ್ ಮಾಡಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ.
ಇನ್ನು ಪ್ರಮುಖವಾಗಿ ಕರಾವಳಿ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಪಿ.ಮುಲ್ಲೈ ಮುಹಿಲನ್ ಅವರನ್ನ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ವರ್ಗಾವಣೆಯಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಮುಲ್ಲೈ ಮುಹಿಲನ್ ಅವರನ್ನು ನೇಮಕ ಮಾಡಲಾಗಿದೆ. 2013ರ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಮುಲ್ಲೈ ಮುಹಿಲನ್ ಎಂ.ಪಿ.ಯವರು ಸದ್ಯ ಬೆಂಗಳೂರಿನ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.