ನವದೆಹಲಿ:
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಲ್ ಅವೀವ್ ಗೆ ಆಗಸ್ಟ್ 8 ರವರೆಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿದೆ. ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು ರಾಷ್ಟ್ರೀಯ ರಾಜಧಾನಿಯಿಂದ ಇಸ್ರೇಲಿ ನಗರಕ್ಕೆ ವಾರಕ್ಕೆ ನಾಲ್ಕು ಬಾರಿ ವಿಮಾನ ಸೇವೆ ನೀಡುತಿತ್ತು.
“ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 8ರವರೆಗೆ ನಿಗದಿತ ವಿಮಾನಗಳ ಕಾರ್ಯಾಚರಣೆಯನ್ನು ಅಮಾನತುಗೊಳಿಸಿದ್ದೇವೆ. ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಏರ್ ಇಂಡಿಯಾ ಕಂಪನಿ ಸಾಮಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.
ಈ ಅವಧಿಯಲ್ಲಿ ಟೆಲ್ ಅವೀವ್ ನಿಂದ ಆಗಮಿಸುವ ಹಾಗೂ ಟೆಲ್ ಅವೀವ್ ಗೆ ನಿರ್ಗಮಿಸುವ ಪ್ರಯಾಣಿಕರಿಗೆ ಒಂದು ಬಾರಿಯ ಮರು ಪ್ರಯಾಣ ಹಾಗೂ ಟಿಕೆಟ್ ರದ್ಧತಿ ಪಾವತಿಯನ್ನು ರದ್ದುಗೊಳಿಸುತ್ತೇವೆ ಎಂದು ತಿಳಿಸಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ಸೇರಿದಂತೆ ವಿವಿಧ ಗುಂಪುಗಳ ನಡುವಿನ ಸಂಘರ್ಷದ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಈ ವರ್ಷದ ಆರಂಭದಲ್ಲಿ, ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಏರ್ ಇಂಡಿಯಾ ವಿವಿಧ ಸಮಯಗಳಲ್ಲಿ ಟೆಲ್ ಅವೀವ್‌ಗೆ ವಿಮಾನಗಳನ್ನು ಸ್ವಲ್ವ ದಿನಗಳ ಕಾಲ ಸ್ಥಗಿತಗೊಳಿಸಿತ್ತು.
ಸುಮಾರು ಐದು ತಿಂಗಳ ನಂತರ, ವಾಹಕವು ಮಾರ್ಚ್ 3 ರಂದು ಇಸ್ರೇಲಿ ನಗರಕ್ಕೆ ಸೇವೆಗಳನ್ನು ಪುನರಾರಂಭಿಸಿತು. ಇಸ್ರೇಲಿ ನಗರದ ಮೇಲೆ ಹಮಾಸ್ ಗುಂಪಿನ ದಾಳಿಯ ನಂತರ ಏರ್ ಇಂಡಿಯಾ ಅಕ್ಟೋಬರ್ 7, 2023 ರಿಂದ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಿತು.