ತಾಪ್ಸಿ ಪನ್ನು ಮದ್ವೆ ಅಂತೆ : ವರ ಯಾರು ಗೊತ್ತಾ….?

ಮುಂಬೈ 

      ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ನಟಿ ತಾಪ್ಸಿ ಪನ್ನು ಮದುಮಗಳಾಗಲು ಸಜ್ಜಾಗಿದ್ದಾರೆ. ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಮತ್ತು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರನ್ನು ಮದುವೆಯಾಗಲಿದ್ದಾರೆ.

    ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರದ್ದು ಸುಮಾರು 10 ವರ್ಷಗಳ ಸಂಬಂಧ. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗಲು ಸಿದ್ಧರಾಗಿದ್ದಾರೆ. ವರದಿಗಳ ಪ್ರಕಾರ, ವಿವಾಹ ಮಹೋತ್ಸವವು ಮಾರ್ಚ್ ಅಂತ್ಯದಲ್ಲಿ ನಡೆಯಲಿದೆ.ತಾಪ್ಸಿ ಪನ್ನು ಮದುವೆ ಉದಯ್‌ಪುರದಲ್ಲಿ ನಡೆಯಲಿದೆ. ಇದು ಕುಟುಂಬ ಮತ್ತು ಸ್ನೇಹಿತರ ನಡುವೆ ನಡೆಯಲಿದ್ದು, ಯಾವುದೇ ಬಾಲಿವುಡ್ ಸೆಲೆಬ್ರಿಟಿ‌ಗಳನ್ನು ಮದುವೆಗೆ ಆಹ್ವಾನಿಸಲಾಗಿಲ್ಲ. ಹೀಗಾಗಿಯೇ ಮದುವೆಯ ಬಳಿಕ ಒಂದು ಅದ್ಧೂರಿ ರಿಸೆಪ್ಷನ್ ನಡೆಯುವ ಸಾಧ್ಯತೆಯಿದೆ.

    ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ವಿವಾಹವು ಸಿಖ್ ಮತ್ತು ಕ್ರಿಶ್ಚಿಯನ್ ಸಂಸ್ಕೃತಿಯ ಸಮ್ಮಿಳನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.   ಶೀಘ್ರದಲ್ಲೇ ವಿವಾಹವಾಗಲಿರುವ ಈ ಜೋಡಿ ‘ಪ್ರೀತಿ ಮತ್ತು ಸಂಸ್ಕೃತಿಯ ಸಮ್ಮೋಹನಗೊಳಿಸುವ ಸಮಾರಂಭದಲ್ಲಿ ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಗಳನ್ನು ಪಾಲಿಸಿ, ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ’.ನಟಿ ತಾಪ್ಸಿ ಪನ್ನು ಸುಮಾರು ಒಂದು ದಶಕದಿಂದ ಡ್ಯಾನಿಶ್ ಬ್ಯಾಡ್ಮಿಂಟನ್ ತರಬೇತುದಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರ ಸಂದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರು ತಮ್ಮ ರಿಲೇಷನ್‌ಶಿಪ್ ಬಗ್ಗೆ ಆಗಾಗ್ಗೆ ಮುಕ್ತವಾಗಿ ಮಾತನಾಡುತ್ತಾರೆ.

    ಕಳೆದ ವರ್ಷ ಜನವರಿ 2023 ರಲ್ಲಿ, ನಟಿ ತಾಪ್ಸಿ ಪನ್ನು ತನ್ನ ಮದುವೆಯ ಬಗ್ಗೆ ಇರುವ ಕನಸನ್ನು ಹಂಚಿಕೊಂಡಿದ್ದರು. ಮದುವೆಯಲ್ಲಿ ಸಕತ್ ಡ್ಯಾನ್ಸ್ ಇರಬೇಕು. ಮದುವೆಗೆ ಬಂದವರಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಆಹಾರ ನೀಡಬೇಕು ಎಂದು ಹೇಳಿಕೊಂಡಿದ್ದರು. ಈಗ ಆ ಸಮಯ ಹತ್ತಿರ ಬಂದಿದ್ದು, ತಾಪ್ಸಿ ಕನಸು ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    “ಒಂದೇ ದಿನದ ಮದುವೆಯಲ್ಲಿ ನ್ಯೂಡ್ ಮತ್ತು ಇತರ ಸೂಕ್ಷ್ಮ ಬಣ್ಣಗಳು ಇರಬೇಕು. ಇದು ತುಂಬಾ ಬೇಸಿಕ್ ಆಗಿರಬೇಕು. ಜಾಸ್ತಿ ನಾಟಕ ಇರಬಾರದು. ಏಕೆಂದರೆ ನನ್ನ ವೃತ್ತಿಪರ ಜೀವನದಲ್ಲಿ ಈಗಾಗಲೇ ಸಾಕಷ್ಟು ನಾಟಕವಿದೆ. ಹೀಗಾಗಿ ನನ್ನ ವೈಯಕ್ತಿಕ ಜೀವನವನ್ನು ಆರಂಭಿಸುವಾಗ ನನಗೆ ಇದು ಬೇಡ” ಎಂದು ಹೇಳಿಕೊಂಡಿದ್ದರು. ಇನ್ನು, ತನ್ನ ಮದುವೆಯಲ್ಲಿ ತಡರಾತ್ರಿಯಲ್ಲಿ ಯಾವುದೇ ಆಚರಣೆಗಳು ಇರಬಾರದು ಎಂದೂ ನಟಿ ಹೇಳಿದ್ದಾರೆ.

    ಮದುವೆಯಲ್ಲಿ ತಾನು ಹೇಗೆ ಕಾಣಿಸಬೇಕು ಎಂಬ ಬಗ್ಗೆ ಆಸೆ ತಿಳಿಸಿದ್ದ ನಟಿ ತಾಪ್ಸಿ, ತನ್ನ ಕೂದಲನ್ನು ಸ್ಟ್ರೈಲ್ ಮಾಡುವುದು ಬೇಡ ಎಂದಿದ್ದರು. ಮುಖದ ಮೇಲೆ ಅಷ್ಟು ದಪ್ಪ ಮೇಕ್ಅಪ್ ಪೇಯರ್‌ಗಳನ್ನು ಹಾಕಿಕೊಂಡಿರುವ ಮದುಮಗಳನ್ನು ನೋಡಿದಾಗ ನನಗೆ ನೋವಾಗುತ್ತದೆ. ಮದುವೆಯ ಚಿತ್ರಗಳಲ್ಲಿ ನೀವು ಹೇಗೆ ಬೇರೆ ವ್ಯಕ್ತಿಯಂತೆ ಕಾಣಿಸುತ್ತಿರಿ? ಈ ನೆನಪುಗಳು ಆ ಕ್ಷಣಕ್ಕಷ್ಟೇ ಅಲ್ಲ, ಶಾಶ್ವತ. ಮತ್ತೆ ಆ ಚಿತ್ರಗಳನ್ನು ನೋಡಬೇಕು ಎಂದು ಅನ್ನಿಸಬೇಕು. ಅದನ್ನು ನೋಡಿದಾಗ ನಿಮ್ಮನ್ನು ನೀವೇ ಗುರುತಿಸಿಸುವುದಿಲ್ಲ” ಎಂದು ತಾಪ್ಸಿ ಹೇಳಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap