ಬೆಂಗಳೂರು:
ಹೊಟ್ಟೆಗೆ ತಿನ್ನೊಕೆ ಏನೂ ಕೊಡಬೇಡಿ ಹೊಟ್ಟೆಗೆ ತಣ್ಣಿರ್ ಬಟ್ಟೆ ಹಾಕೋ ಕೆಲಸ ಮಾಡಬೇಡಿ. ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರ.. ?? ದೇವಸ್ಥಾನ ಕಟ್ಟುವರು ಓಬಿಸಿ , ದಲಿರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು.
ನೀವು ಮಜಾ ಮಾಡುವವರು. ಯಾರೂ ಶಾಶ್ವತವಲ್ಲ. ಹಿಂದೂ ಯುವಕರಲ್ಲಿ ಕೈಮುಗಿದು ಕೇಳುತ್ತೇನೆ, ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಲಾಲ್ ಮಾಂಸ ಖರೀದಿಸಬೇಡಿ ಎಂದವರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ವಾಟ್ಸ್ ಆಪ್ ನೋಡಿದ್ದೇನೆ. ಹಣ್ಣು, ಕಿರಾಣಿ ಅಂಗಡಿಗಳು, ಎಲೆಕ್ಟ್ರಿಕ್ ಶಾಪ್ ಹೀಗೆ ಹಿಂದು ಅಂಗಡಿಗಳಿಗೆ ಹೋಗಿ ಅಂದಿದ್ದಾರೆ. ಸಭಾಧ್ಯಕ್ಷರು ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ.
ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಯಾರು ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಭಹಿಷ್ಕಾರ ಮಾಡಿ ಎಂದರು.
ಈದ್ಗಾ ಮೈದಾನದಲ್ಲಿ ಬಲಿ ತಗೊತಿದ್ರಿ ಇದನ್ನು ದೇವೇಗೌಡರು ಸರಿ ಮಾಡಿದ್ರು. ಉತ್ತರ ಭಾರತ ಬೇರೆ ಅಲ್ಲಿ ಮೊಘಲ್ ಆಡಳಿತ ಬಂತ್ತು. ಕರ್ನಾಟಕದಲ್ಲಿ ಹುಟ್ಟು ಹಾಕ್ತಿದ್ರಿ. ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ. ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ. ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ಒಂದು ಕಡೆ , ಬಿಜೆಪಿ ಒಂದು ಕಡೆ ಕಾರಣ. ಕನ್ನಡಿಗರೆ ದಾರಿ ತಪ್ಪಬೇಡಿ ಎಂದು ಹೇಳಿದರು.
ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ, ಉತ್ಪನ್ನಗಳನ್ನು ಭಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ
ಹೊಟ್ಟೆಗೆ ತಿನ್ನೊಕೆ ಏನೂ ಕೊಡಬೇಡಿ ಹೊಟ್ಟೆಗೆ ತಣ್ಣಿರ್ ಬಟ್ಟೆ ಹಾಕಿ. ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರ.. ?? ದೇವಸ್ಥಾನ ಕಟ್ಟುವರು ಓಬಿಸಿ , ದಲಿರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದ್ಯಾ, ಏನ್ ಮಾಡ್ತಿದೆ ಸರ್ಕಾರ. ಆರು ವರೆಗೆ ಕೋಟಿ ಜನಕ್ಕೆ ನಿಮ್ಮ ಸರ್ಕಾರ ಅಲ್ವ ಎಂದರು.
ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಅರೆಸ್ಟ್ ಮಾಡಿದ್ರಿ. ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ. ಇವರು ದೇಶ ಉಳಿಸುವವರಲ್ಲ. ಅಮಾಯಕರು ದೇಶ ಉಳಿಸಿದ್ರು. ಯುವಕರಿಗೆ ಹೇಳುತ್ತೇನೆ ಯಾರು ಯುವಕರು ಇದಕ್ಕೆ ಬಲಿಯಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ ಎಂಬುದಾಗಿ ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಕುಮಾರಸ್ವಾಮಿ ಕಿಡಿಕಾರಿದರು.
2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
