2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ

ಬೆಂಗಳೂರು:

   ಬೆಂಗಳೂರು ಮಾ.29- ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಉಳಿದಿದಿರುವ ಬೆನ್ನಲ್ಲೇ ಚುನಾವಣಾ ಸಿದ್ಧತೆಗಳು ಈಗನಿಂದಲೇ ಆರಂಭವಾಗಿದ್ದು, ಜನರನ್ನು ಸೆಳೆಯುವ ಪ್ರಯತ್ನಗಳು ರಾಜಕೀಯ ಪಕ್ಷಗಳಿಂದ ಚುರುಕುಗೊಂಡಿದೆ.ಅದರಲ್ಲೂ ಕಮಲ ಪಕ್ಷ ಚುನಾವಣಾ ಅಖಾಡದಲ್ಲಿ ಗೆಲುವಿಗೆ ಅಸ್ತ್ರಗಳ ಜೊತೆ ಪ್ರಬಲವಾದ ಚಕ್ರವ್ಯೂಹವನ್ನು ರಚನೆ ಮಾಡುತ್ತಿದ್ದಾರೆ.

 ಪಂಚರಾಜ್ಯ ಚುನಾವಣೆ ಫಲಿತಾಂಶ, ಹಿಜಾಬ್ ವಿವಾದ, ಕಾಶ್ಮೀರ್ ಫೈಲ್ಸ್ ಸಿನಿಮಾ, ಶಾಲಾ ಪಠ್ಯದಲ್ಲಿ ಭಗವದ್ಗೀತೆ, ಟಿಪ್ಪು ಇತಿಹಾಸ ಕೈ ಬಿಟ್ಟು ಪಠ್ಯ ಪರಿಷ್ಕರಣೆ, ಹರ್ಷ ಕೊಲೆ ಪ್ರಕರಣ ಎನ್‍ಐಎಗೆ ಹೀಗೆ ಸಾಲು ಸಾಲು ಬ್ರಹ್ಮಾಸ್ತ್ರಗಳು ಬಿಜೆಪಿ ಬಳಿ ಇವೆ.

ಚುನಾವಣೆಯ ಆರಂಭಿಕ ಹಂತವಾಗಿ ಇವೆಲ್ಲವೂ ಸದ್ದು ಮಾಡುತ್ತಿವೆ. ಇದರ ಜೊತೆಗೆ ಮುಸ್ಲಿಮರಿಗೆ ಜಾತ್ರೆಯಲ್ಲಿ ವ್ಯಾಪಾರ ನಿರ್ಬಂಧದಂತಹ ವಿಚಾರಗಳು ಚುನಾವಣಾ ಚರ್ಚೆಯ ಮುನ್ನಲೆಗೆ ಬರುತ್ತಿವೆ. ಹೀಗೆ ಅಸ್ತ್ರಗಳ ಮೇಲೊಂದರಂತೆ ಅಸ್ತ್ರಗಳನ್ನು ಹೊರಬಿಡುತ್ತಾ ಚರ್ಚೆಗಳನ್ನು ಹುಟ್ಟುಹಾಕಲಾಗುತ್ತಿದೆ.

ಉಕ್ರೇನ್ ನೆರವಿಗೆ ಭಾರತದ ಗಾಯಕಿ ಕಾರ್ಯಕ್ರಮದಲ್ಲಿ ಹಣದ ಸುರಿಮಳೆ!

ಇದಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳೇ ಚುನಾವಣಾ ಪ್ರಚಾರ ಸಾಮಾಗ್ರಿಗಳಾಗುತ್ತಿವೆ. ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಂಘಟನೆಯನ್ನು ಬಿಗಿಗೊಳಿಸುವ ಪ್ರಯತ್ನಕ್ಕೂ ಚಾಲನೆ ಸಿಕ್ಕಿದೆ.

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೂಚನೆಯಂತೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಬಗಿಗೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶಿವಪ್ರಕಾಶ್ ಅವರು ಬೆಂಗಳೂರು ಬಿಜೆಪಿ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆದಿದೆ.

 ಏಪ್ರಿಲ್‍ನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ:

ಇನ್ನು ಏಪ್ರಿಲ್ ತಿಂಗಳಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗಿಯಾಗಲಿದ್ದಾರೆ.ಏಪ್ರಿಲ್ 16 ಮತ್ತು 17 ರಂದು ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಯ ಮುಂದಿನ ಕಾರ್ಯರೂಪಗಳ ಬಗ್ಗೆ ಚರ್ಚೆ ನಡೆಯಲಿದೆ.

ಹರಾಜಾಗಿದೆ ವಿಶ್ವದ ದುಬಾರಿ ಒಂಟೆ, ಇದರ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ…!

ಇದಾದ ಬಳಿಕ ಸಚಿವರು ಹಾಗೂ ಶಾಸಕರಿಗೆ ಪಕ್ಷ ಸಂಘಟನೆಗೆ ಒತ್ತು ನೀಡುವ ಕುರಿತಾಗಿ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಜೆಪಿ ಚುನಾವಣಾ ಅಖಾಡವನ್ನು ಎದುರಿಸಲು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳ್ಳುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯತಂತ್ರಗಳನ್ನು ರೂಪಿಸುವ ಚಿಂತನೆ ನಡೆಯುತ್ತಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link