ಬೆಂಗಳೂರು:
ಕನ್ನಡದ ಹಿರಿಯ ಹಾಸ್ಯನಟ ದೊಡ್ಡಣ್ಣ ಅವರಿಗೆ ಅನಾರೋಗ್ಯ ಉಂಟಾದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ನಟ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ದೊಡ್ಡಣ್ಣ ಅವರ ಹೃದಯಬಡಿತದಲ್ಲಿ ಏರುಪೇರು ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೃದಯದ ಬಡಿತ ಕಡಿಮೆ ಇದ್ದಾಗ ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ ಹೀಗಾಗಿ ಕೃತಕ ಫೇಸ್ ಮೇಕರ್ ಮೂಲಕ ಚಿಕಿತ್ಸೆ ನೀಡ್ತಿದ್ದೇವೆ. ಹೃದಯಾಘಾತದಂತಹ ಸಮಸ್ಯೆ ಏನೂ ಇಲ್ಲ ಅವರು ಈಗ ಆರಾಮಾಗಿ ಇದ್ದಾರೆ. ಇನ್ನೂ ಮೂರು ದಿನಗಳು ಅವರಿಗೆ ಚಿಕಿತ್ಸೆ ಮುಂದುವರಿಯುತ್ತೆ ಎಂದು ಜಯದೇವ ಆಸ್ಪತ್ರೆ ವೈದ್ಯ ಮಂಜುನಾಥ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ