ಶ್ರೀನಗರ :
ರಜೆಯ ಮೇಲೆ ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿರುವ ತನ್ನೂರಿಗೆ ಬಂದಿದ್ದ ಭಾರತೀಯ ಯೋಧರೊಬ್ಬರನ್ನು ಉಗ್ರರು ಅಪಹರಿಸಿದ್ದಾರೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಉಗ್ರರಿಂದ ಅಪಹರಿಸಲ್ಪಟ್ಟಿರುವ ಯೋಧ ಮೊಹಮ್ಮದ್ ಯಾಸೀನ್ ಭಟ್ ಜಮ್ಮು ಕಾಶ್ಮೀರದ ಲೈಟ್ ಇನ್‍ಫ್ಯಾಂಟ್ರಿಗೆ ನೇಮಕವಾಗಿದ್ದರು. ನಿನ್ನೆ ಸಂಜೆ ಕೆಲವು ಉಗ್ರರು ಯಾಸೀನ್ ಅವರ ಮನೆಯೊಳಗೆ ನುಗ್ಗಿದ್ದು, ಬಲವಂತವಾಗಿ ಕಾಡಿನೊಳಕ್ಕೆ ಎಳೆದೊಯ್ದಿದ್ದಾರೆ.
ಒಂದು ತಿಂಗಳ ರಜೆಯ ಮೇಲೆ ಫೆ. 26ರಂದು ಯಾಸೀನ್ ಊರಿಗೆ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಸೇನಾಪಡೆಯ ಸಿಬ್ಬಂದಿ ಯಾಸೀನ್ ಅವರ ಮನೆಗೆ ತೆರಳಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ತಪಾಸಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
