ಯಾವುದೇ ಕಾರಣಕ್ಕೂ ಇವರನ್ನು ನಿದ್ದೆಯಿಂದ ಎಬ್ಬಿಸಬೇಡಿ….!

ತುಮಕೂರು : 

      ಚಾಣಕ್ಯನ ತತ್ವಗಳು ಇಂದಿನ ಜೀವನಕ್ಕೆ ಕೂಡಾ ಬಹಳ ಉಪಯೋಗವಾಗುವಂಥವು. ಎಲ್ಲರ ಜೀವನಕ್ಕೆ ಅವು ಮಾರ್ಗದರ್ಶನ ನೀಡುತ್ತವೆ. ಜೀವನ ಸುಗಮವಾಗಿ ಸಾಗಲು ಅವರು ಯಾವ ಮಾರ್ಗವನ್ನು ಸೂಚಿಸಿದರೂ ಅದರಲ್ಲಿ ಬುದ್ಧಿವಂತಿಕೆ, ವಿವೇಚನೆ ಮತ್ತು ಬುದ್ಧಿವಂತಿಕೆ ಅಡಗಿರುವುದನ್ನು ಕಾಣಬಹುದು.

      ಪತ್ನಿ, ಹಣ, ಸಂಬಂಧ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚಾಣಕ್ಯ ಸಾಕಷ್ಟು ತತ್ವಗಳನ್ನು ಹೇಳುತ್ತಾರೆ .ಶತಮಾನಗಳ ಹಿಂದೆ ಅವರು ರೂಪಿಸಿದ ಜೀವನ ತತ್ವಗಳು ಇಂದಿಗೂ ಅನ್ವಯವಾಗುತ್ತವೆ. ಅವರು ಸೂಚಿಸಿದ ವಿಧಾನಗಳ ಮೂಲಕ ಅವರನ್ನು ಸಮಾಜ ಸುಧಾರಕ ಎಂದು ಪರಿಗಣಿಸಬಹುದು. ಅವರು ಈ ಜಗತ್ತಿಗೆ ಅಪಾರವಾದ ಜ್ಞಾನವನ್ನು ನೀಡಿದರು. ಚಾಣಕ್ಯನನ್ನು ಕೌಟಿಲ್ಯ ಎಂದು ಕರೆಯುತ್ತಾರೆ. ಅವರು ಸೂಚಿಸಿದ ಮಾರ್ಗವನ್ನು ಅನುಸರಿಸಿ ಜೀವನವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಬಹುದು. ಮನುಷ್ಯನನ್ನೂ ಸೇರಿಸಿ ಈ 6 ಜೀವಿಗಳನ್ನು ನಿದ್ರೆಯಿಂದ ಎಬ್ಬಿಸಬಾರದು ಎಂದು ಚಾಣಕ್ಯ ತನ್ನ ನೀತಿಯಲ್ಲಿ ಉಲ್ಲೇಖಿಸಿದ್ದಾರೆ.

    ಅಹಿಂ ನೃಪನ್ ಚ ಶಾರ್ದೂಲಂ ಕಿತಿನ್ ಚ ಬಾಲ್ಕನ್ ತತ್ । ಪಾರ್ಶ್ವಾನಾಂ ಚ ಮೋರ್ಖಂ ಚ ಸಪ್ತ ಸುಪ್ತಾನ್ ಬೋಧ್ಯಾತ್ ॥ ಎಂಬ ಮಾತಿನ ಪ್ರಕಾರ ಮಲಗಿರುವ

   ಹಾವು, ರಾಜ, ಸಿಂಹ, ಮಕ್ಕಳು, ನಾಯಿಯನ್ನು ಯಾವುದೇ ಕಾರಣಕ್ಕೂ ಎಬ್ಬಿಸಬಾರದು. ಒಂದು ವೇಳೆ ನಿದ್ರೆಯಿಂದ ಅವರನ್ನು ಎಬ್ಬಿಸಿದರೆ ಅಪಾಯ ಅವರಿಗಿಂತ ನಿಮಗೇ ಹೆಚ್ಚು ಎನ್ನುತ್ತಾರೆ ಚಾಣಕ್ಯ.

ರಾಜ

    ರಾಜನು ಸದಾ ಪ್ರಜೆಗಳ ಸೇವೆಯಲ್ಲಿ ನಿರತನಾಗಿರುತ್ತಾನೆ. ಪ್ರಜೆಗಳ ಕಷ್ಟ ಸುಖಗಳಲ್ಲಿ ರಾಜನು ಊಟ, ನಿದ್ರೆ ಬಿಟ್ಟು ಭಾಗಿಯಾಗುತ್ತಾನೆ. ಆದರೆ ಒಮ್ಮೆ ರಾಜ ನಿದ್ರೆಗೆ ಜಾರಿದರೆ ಆತನನ್ನು ಎಂದಿಗೂ ಎಬ್ಬಿಸಬಾರದು ಎಂದು ಚಾಣಕ್ಯ ಹೇಳುತ್ತಾರೆ. ಒಂದು ವೇಳೆ ನೀವು ರಾಜನನ್ನು ನಿದ್ರೆಯಿಂದ ಎಬ್ಬಿಸಿದರೆ ಅದು ಬಹಳ ಅಪಾಯಕಾರಿ, ರಾಜನ ಕೋಪ ನಿಮಗೆ ಸಮಸ್ಯೆ ತರಬಹುದು, ಆತ ನಿಮ್ಮನ್ನು ಶಿಕ್ಷಿಸಬಹುದು.

ಸಿಂಹ

    ಕೆರಳಿದ ಸಿಂಹ ಎಂಬ ಮಾತೇ ಇದೆ. ಸಿಂಹ ವನ್ಯ ಮೃಗ, ಸಿಂಹನನ್ನು ಕೆಣಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ನೀವು ಮಲಗಿರುವ ಸಿಂಹನನ್ನು ಕೆಣಕಿದರೆ ನಿಮ್ಮ ಕಥೆ ಮುಗಿದಂತೆ. ಆ ಸಿಂಹ ನಿಮ್ಮ ಮೇಲೆ ದಾಳಿ ಮಾಡಿಸುವ ಸಾಧ್ಯತೆ ಇದೆ. ಅದರ ಮುಂದೆ ಮನುಷ್ಯನಾಗಲೀ, ಬೇರೆ ಪ್ರಾಣಿಯಾಗಲೀ ಜಯಿಸಲಾರವು. ಆದ್ದರಿಂದ ಮಲಗಿರುವ ಸಿಂಹನನ್ನು ಎಬ್ಬಿಸುವ ಪ್ರಯತ್ನ ಮಾಡಬಾರದು.

ಹಾವು

    ಹಾವಿನ ಜೊತೆ ಸರಸ ಬೇಡ ಎಂದು ಹಿರಿಯರು ಹೇಳಿದ್ದಾರೆ. ಹಾವು ವಿಷ ಜಂತು. ಅದನ್ನು ಕಂಡು ಹೆದರದವರು ಯಾರೂ ಇಲ್ಲ. ಹಾವು ಎಡೆ ಎತ್ತಿ ಬುಸುಗುಟ್ಟಿದರೆ ಸಾಕು ಎದುರಿಗಿದ್ದ ಜೀವ ಹೋದಂತೆ ಎನ್ನಿಸದೆ ಇರದು. ಆದ್ದರಿಂದ ಮಲಗಿದ ಹಾವನ್ನು ಕೂಡಾ ಎಂದಿಗೂ ಕೆಣಕುವ ಪ್ರಯತ್ನ ಮಾಡಬಾರದು.

ಮಕ್ಕಳು

    ಶಿಶುಗಳು ನಿದ್ರಿಸುತ್ತಿದ್ದರೆ, ಅವರ ನಿದ್ರೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ. ಅರ್ಧ ನಿದ್ರೆಯಿಂದ ಏಳುವ ಮಕ್ಕಳು ತುಂಬಾ ಕೆರಳುತ್ತಾರೆ. ನೀವು ಎಷ್ಟೇ ಸಮಾಧಾನ ಮಾಡಿದರೂ ಮಕ್ಕಳು ಸುಮ್ಮನಾಗುವುದಿಲ್ಲ. ಯಾಕಾದರೂ ಎಬ್ಬಿಸಿದೆನೋ ಎಂದು ನೀವು ಪಶ್ಚಾತಾಪಪಡಬೇಕಾಗಬಹುದು ಆದ್ದರಿಂದ ಮಲಗಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ಎಬ್ಬಿಸಬೇಡಿ.

ನಾಯಿ

   ಕೆಲವರಿಗೆ ನಾಯಿಗಳಿಗೆ ಕಲ್ಲು ಹೊಡೆಯುವುದು, ಕಡ್ಡಿ ತೋರಿಸಿ ಕೆಣಕುವ ಅಭ್ಯಾಸವಿರುತ್ತದೆ. ಆದರೆ ಶಾಂತವಾಗಿ ಮಲಗಿರುವ ನಾಯಿಗೂ ಯಾರೂ ತೊಂದರೆ ಕೊಡಬೇಡಿ. ನೀವು ಅದರ ನಿದ್ದೆ ಕೆಡಿಸುವುದರಿಂದ ಎದುರಿನವರಿಗೆ ಕಚ್ಚುವ ಅಪಾಯವಿದೆ.

ಬುದ್ಧಿ ಇಲ್ಲದ ವ್ಯಕ್ತಿ

    ಮಲಗಿರುವ ಮೂರ್ಖ ವ್ಯಕ್ತಿಯನ್ನು ಎಬ್ಬಿಸಿದರೆ, ನೀವು ತೊಂದರೆಗೆ ಸಿಲುಕುತ್ತೀರಿ. ಯಾವುದೇ ಕಾರಣ ಇರಬಹುದು, ಅರ್ಥ ಮಾಡಿಕೊಳ್ಳುವುದಿಲ್ಲ. ಅದರ ಬದಲಿಗೆ ನೀವು ಅವನನ್ನು ಎಬ್ಬಿಸಿದ್ದೇ ದೊಡ್ಡ ತಪ್ಪು ಎನ್ನುವಂತೆ ನಿಮ್ಮ ಮೇಲೆ ಜಗಳಕ್ಕೆ ಬರುವುದು ಖಚಿತ.ನಿಮಗೆ ಸಮಸ್ಯೆ ಆಗುವುದರಿಂದ ಈ ಏಳು ವಿಧದ ಪ್ರಾಣಿಗಳ ನಿದ್ರೆಗೆ ಎಂದಿಗೂ ಭಂಗ ತರದಂತೆ ನೋಡಿಕೊಳ್ಳಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap