HCQ ಮಾತ್ರೆಗಳ ಬಳಕೆ : ಮತ್ತೊಮ್ಮೆ ಮುಜುಗರಕ್ಕೀಡಾದ WHO..!

ವಾಷಿಂಗ್ಟನ್:

      ಕೊರೋನಾ ಸೋಂಕು ಸಂಬಂಧ ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಮತ್ತೊಂದು ಎಡವಟ್ಟು ಬಹಿರಂಗವಾಗಿದೆ. ಈ ಹಿಂದೆ WHO ಕೊರೋನಾ ರೋಗಿಗಳಿಗೆ HCQ ನೀಡುವುದು ಅತ್ಯಂತ ಮಾರಕ ಎಂದು ಹೇಳಿ ಅದರ ಬಳಕೆ ಮೇಲೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಕೊರೋನಾ ರೋಗಿಗಳಿಗೆ HCQ ಮಾರಕ ಎಂಬ ವರದಿಯನ್ನೇ ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ಧೃಡ ಪಟ್ಟಿದೆ.

     ಕೊರೋನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋಕ್ವಿ ನ್ಮಾರಕ ಎಂದು ಹೇಳಿದ್ದ ಸಂಶೋಧನಾ ವರದಿಯನ್ನು ಲ್ಯಾನ್ಸೆಟ್ ಸ್ಟಡಿ ಹಿಂದಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಸಂಶೋಧನಾಕಾರರು ಸಂಪೂರ್ಣ ದತ್ತಾಂಶವನ್ನು ಹಂಚಿಕೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ವರದಿಯನ್ನು ಹಿಂಪಡೆಯಲಾಗಿದೆ ಎನ್ನಲಾಗಿದೆ.

       ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ HCQ ಕೊರೋನಾ ರೋಗಿಗಳ ಜೀವಕ್ಕೆ ಮಾರಕ ಎಂದು ಅದರ ಬಳಕೆ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಸಾಕಷ್ಚು ಪ್ರಶ್ನೆಗಳು ಉದ್ಬವಿಸಿತ್ತು. ಸರ್ಜಿಕಲ್ ಸ್ಪೇರ್ ಕಾರ್ಪೋರೇಷನ್ ಮತ್ತು ಅದರ ಸಂಸ್ಥಾಪಕ, ಸಹ ಲೇಖಕ ಸಪನ್ ದೇಸಾಯಿ ಅವರು ಲ್ಯಾನ್ಸೆಟ್ ಜರ್ನಲ್ ಗೆ ನೀಡಿದ್ದ ವರದಿಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

      ಈ ವರದಿಯನ್ನು ಪರಿಶೀಲಿಸಿದ್ದ ಪೀರ್ ರೀವ್ಯೂವರ್ ಗಳು ಸರ್ಜಿಕಲ್ ಸ್ಪೇರ್ ಕಾರ್ಪೋರೇಷನ್ ಸಂಸ್ಥೆ ಸಂಶೋಧನೆಯ ಸಂಪೂರ್ಣ ದತ್ತಾಂಶವನ್ನು ನೀಡಿಲ್ಲ ಎಂದು ಹೇಳಿದ್ದರು.  ಇದರ ಬೆನ್ನಲ್ಲೇ ಸರ್ಜಿಕಲ್ ಸ್ಪೇರ್ ಕಾರ್ಪೋರೇಷನ್ ಸಂಸ್ಥೆ ತನ್ನ ವರದಿಯನ್ನು ಹಿಂದಕ್ಕೆ ಪಡೆದಿದೆ.

ಅನುಮಾನ ಮೂಡಿಸಿದ ವಿಶ್ವ ಆರೋಗ್ಯ ಸಂಸ್ಥೆಯ ನಡೆ

     ಇನ್ನು ಈ ಅಪೂರ್ಣ ವರದಿಯನ್ನೇ ಮುಂದಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ HCQ ಔಷಧಿ ಕೊರೋನಾ ರೋಗಿಳಿಗೆ ಮಾರಕವಾಗಬಹುದು ಎಂದು ಹೇಳಿ ಅದರ ಬಳಕೆ ಮೇಲೆ ನಿರ್ಬಂಧ ಹೇರಿತ್ತು, ಆದರೆ ಬಳಿಕ ತನ್ನ ನಿರ್ಧಾರವನ್ನು ಬದಲಿಸಿತ್ತು. ಒಟ್ಟಾರೆ ವಿಶ್ವ ಆರೋಗ್ಯ ಸಂಸ್ಥೆಯ ಈ ತರಾತುರಿ ನಿರ್ಧಾರಗಳು ಅದರ ನಡೆ ಮೇಲೆ ಅನುಮಾನ ಮೂಡುವಂತೆ ಮಾಡುತ್ತಿದೆ.

     ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಪರೀಕ್ಷೆಯನ್ನು ಪುನರಾರಂಭಿಸಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ನಿರ್ಧಾರವನ್ನು ಸಿಎಸ್‌ಐಆರ್‌, ಈ ಹಿಂದೆ ತರಾತುರಿಯಲ್ಲಿ ಮಾತ್ರೆಗಳ ಪರೀಕ್ಷಾ ಪ್ರಕ್ರಿಯನ್ನು ನಿಲ್ಲಿಸಲಾಗಿತ್ತು ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಮಾತನಾಡಿರುವ ಸಿಎಸ್‌ಐಆರ್ ಮಹಾನಿರ್ದೇಶಕ ಡಾ. ಶೇಖರ್ ಸಿ ಮಾಂಡೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಪರೀಕ್ಷೆಯನ್ನು ಪುನರಾರಂಭಿಸಿರುವ WHO ನಿರ್ಣಯ ಉತ್ತಮವಾದುದು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap