ಪ್ರಗತಿ ಅರಿವಿನ ಹೆಜ್ಜೆ (ಕುಡಿದು ವಾಹನ ಚಲಾಯಿಸಬೇಡಿ)

ತುಮಕೂರು:

     ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿ ವತಿಯಿಂದ ‘ಕುಡಿದು ವಾಹನ ಚಲಾಯಿಸಬೇಡಿ’ ಎಂಬ ವಿಶೇಷ ಅರಿವಿನ ಹೆಜ್ಜೆಯ ವಾಕಥಾನ್ ಅನ್ನು ಇಂದು ಶನಿವಾರ ನಗರದಲ್ಲಿ ಆಯೋಜಿಸಲಾಗಿತ್ತು.

     ಜಿಲ್ಲಾ ಪೊಲೀಸ್ ಇಲಾಖೆ, ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ವಿ-ಟೆಕ್ನೊ ನೀಟ್ ಅಕಾಡೆಮಿ, ಆಡ್ 6 ಅಡ್ವರ್ಟೈಸಿಂಗ್, ತುಮಕೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ಈ ವಿಶೇಷ ಜಾಗೃತಿ ವಾಕಥಾನ್ನಲ್ಲಿ ನಗರದ ಸುಮಾರು 1000ಕ್ಕೂ ಅಧಿಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು. ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡರು.

    ನಗರದ ಡಾ.ಶ್ರೀ.ಶಿವಕುಮಾರಸ್ವಾಮೀಜಿ ವೃತ್ತದಿಂದ ಆರಂಭಗೊಂಡ ವಾಕಥಾನ್ ಗೆ ಶಾಸಕ ಜಿ ಬಿ ಜ್ಯೋತಿಗಣೇಶ್ , ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು .ಪ್ರಜಾಪ್ರಗತಿ ಹಾಗೂ ಪ್ರಗತಿ ಟೀವಿ ಸಂಪಾದಕರಾದ ಎಸ್ ನಾಗಣ್ಣ , ಸಿಇಓ ಟಿ ಎನ್ ಶಿಲ್ಪಶ್ರೀ , ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾದ ಮುರುಳಿಧರ ಹಾಲಪ್ಪ , ಸಿದ್ದಗಂಗಾ ಆಸ್ಪತ್ರೆಯ ನಿರ್ಧೇಶಕ ಡಾ|| ಪರಮೇಶ್ ಪ್ರಿನ್ಸಿಪಾಲ್ ಡಾ|| ಶಾಲಿನಿ, ಐಎಂಎ ಜಿಲ್ಲಾಧ್ಯಕ್ಷರು ಡಾ|| ರಂಗಸ್ವಾಮಿ ಜಿಲ್ಲಾ ಕಾರ್ಯದರ್ಶಿ ಡಾ|| ಮಹೇಶ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಗಿರೀಶ್ ಮಾಜಿ ಅಧ್ಯಕ್ಷ ಲೋಕೇಶ್ ಹಾಗೂ ಪದಾಧಿಕಾರಿಗಳು ಮತ್ತು ರೋಟರಿ, ಜಸಿಐ ಸೇರ ವಿವಿಧ ಶಾಲಾ ಕಾಲೇಜು ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap