ಗುಬ್ಬಿ:
ಮಕ್ಕಳನ್ನು ಅಂಕ ತೆಗೆಯುವ ಯಂತ್ರಗಳನ್ನಾಗಿ ಮಾಡಬೇಡಿ ಜ್ಞಾನೋತ್ಪಾದನೆಯ ಯಂತ್ರ ಗಳನ್ನಾಗಿ ಮಾಡಿ ಎಂದ ಪ್ರಜಾಪ್ರಗತಿ ಸಂಪಾದಕ ಎಸ್ ನಾಗಣ್ಣ,
ಗುಬ್ಬಿ ತಾಲೂಕು ಕಾಡ ಶೆಟ್ಟಿಹಳ್ಳಿಯ ಪಿ ಎಂ ಶ್ರೀ ಶಾಲೆಯಲ್ಲಿ ಇಂದು ಬೆಳಿಗ್ಗೆ ವರ್ಚುಯಲ್ ರಿಯಾಲಿಟಿ ಲ್ಯಾಬ್ ಉದ್ಘಾಟನೆ ಗೊಳಿಸಿ ಮಾತನಾಡಿದರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವಂತಹ ಸ್ಥಿತಿಯಲ್ಲಿ ಕಾಡಶೆಟ್ಟಿಹಳ್ಳಿ ಶಾಲೆ ಆಧುನಿಕ ಶಿಕ್ಷಣದತ್ತ ಸಾಗುತ್ತಿರುವುದು ಸಂತೋಷದ ವಿಷಯ ಈ ಶಾಲೆಗೆ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯ ಕಾದಶೆಟ್ಟಿಹಳ್ಳಿ ಸತೀಶ್ ರವರನ್ನು ಅಭಿನಂದಿಸಿದರು.
ಇಂದು ಲೋಕಾರ್ಪಣೆಗೊಂಡ ವಿಆರ್ ಲ್ಯಾಬ್ ತುಮಕೂರಿನ ಪ್ರಸನ್ನ ಗಣಪತಿ ಸೇವಾ ಸಮಿತಿ ನೀಡಿದ್ದ ಐದು ಲಕ್ಷ ದೇಣಿಗೆಯಲ್ಲಿ ನಿರ್ಮಾಣಗೊಂಡಿದೆ ಕಾರ್ಯಕ್ರಮದಲ್ಲಿ ಸೇವಾಸಮಿತಿಯ ಚಂದ್ರಕಾಂತ್, ಮೃತ್ಹುಂಜಯ, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್,ಗ್ರಾಮಪಂಚಾಯ್ತಿ ಅಧ್ಯಕ್ಷೆ ಹಾಗೂ ಶಿಕ್ಷಕರು ಭಾಗವಹಿಸಿದ್ದರು.
