ಕ್ರೀಡಾಪಟುಗಳು ಗುರಿ ಮುಟ್ಟುವವರೆಗೆ ನಿಲ್ಲದಿರಿ

ತಿಪಟೂರು:

       

ಕ್ರೀಡಾಪಟುಗಳಿಗೆ ಸೋಲು-ಗೆಲುವು ಎಂಬ ಅಂಶಗಳನ್ನು ಬದಿಗೊತ್ತಿ ಸಾಧನೆಯ ಹಾದಿಯೊಂದಿಗೆ ಗುರಿ ಮುಟ್ಟುವ ಛಲದೊಂದಿಗೆ, ಗುರಿಯನ್ನು ಬೆನ್ನತ್ತಿ, ಗುರಿ ಮುಟ್ಟುವರೆಗೆ ನಿಲ್ಲಬೇಡಿ ಎಂದು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಕ್ರೀಡಾಪಟು ಹಾಗು ಏಕಲವ್ಯ ಪುರಸ್ಕøತೆ ಖುಷಿ ವಿಶ್ವನಾಥ್ ತಿಳಿಸಿದರು.

ಅವರು ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದÀಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿ ಇವರ ಸಹಯೋಗದೊಂದಿಗೆ ವಿ.ಟಿ.ಯು ಕೋಲಿಗೇಟ್ ಸೆಂಟ್ರಲ್ ಕರ್ನಾಟಕ ಜೋನ್ ಟೀಬಲ್ ಟಿನಿಸ್ ಪಂದ್ಯಾವಳಿಗಳ (ಪುರುಷ ಮತ್ತು ಮಹಿಳೆ) ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪುಟಗಳ ಹಾದಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಗುರುತರವಾದ ವ್ಯಕ್ತಿಗಳಾಗಿ ತಮ್ಮಗಳ ಉಜ್ವಲ ಭವಿಷ್ಯಗಳನ್ನು ರೂಪಿಸಿಕೊಳ್ಳಬೇಕು. ಶ್ರದ್ಧೆ ಮತ್ತು ಸಂಯಮದ ಜೊತೆಗೆ ಗುರುಗಳ ಮಾರ್ಗದರ್ಶನದಲ್ಲಿ ನಿಮ್ಮದೇ ಆದ ಸಾಧನೆಯನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, 52 ಚಿನ್ನ, 50 ಬೆಳ್ಳಿ, ಮತ್ತು 54 ಕಂಚಿನ ಪದಕಗಳನ್ನು ಪಡೆದಿರುವ ಅಂತಾರಾಷ್ಟ್ರೀಯ ಟೀಬಲ್ ಟೆನಿಸ್ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕøತೆ ಖುಷಿ ವಿಶ್ವನಾಥ್ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಬೇಕು. ಇಂತಹ ಮಹಾನ್ ಸಾಧಕಿಯರನ್ನು ನೋಡಿ ನೀವು ಅವರಂತಾಗಬೇಕೆಂಬ ದೃಢÀನಿಶ್ಚಯ ಮಾಡಿಕೊಂಡು ಕೀರ್ತಿ ಮತ್ತು ಯಶಸ್ಸನ್ನು ಕಂಡುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿದರು, ಉಪಾಧ್ಯಕ್ಷ ಜಿ.ಪಿ.ದೀಪಕ್, ಕಾರ್ಯದರ್ಶಿ ಎಮ್.ಆರ್.ಸಂಗಮೇಶ್, ಸುಧಾಕರ್ ಹೆಚ್.ಜಿ, ಟಿ.ಯು. ಜಗದೀಶಮೂರ್ತಿ, ಕೆ.ಐ.ಟಿ ಪ್ರಾಂಶುಪಾಲ ಡಾ.ಜಿ.ಡಿ.ಗುರುಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಜಯಂತ್ ಎಂ.ಎಸ್ ಹಾಗೂ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಯೋಗೀಶ್ ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.

ವಿ.ಟಿ.ಯು ಕೋಲಿಗೇಟ್ ಸೆಂಟ್ರಲ್ ಕರ್ನಾಟಕ ಜ್ಹೋನ್ ಟೀಬಲ್ ಟಿನಿಸ್ ಪಂದ್ಯಾವಳಿಗಳ (ಪುರುಷ ಮತ್ತು ಮಹಿಳೆ) ಕ್ರೀಡಾಕೂಟ ಉದ್ಘಾಟನೆಯಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ಪುರಸ್ಕøತೆ ಖುಷಿ ವಿಶ್ವನಾಥ್ ಮತ್ತಿತರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap