ಅಪ್ಪಾಜಿ ತೀರಿಕೊಂಡು 16 ವರ್ಷಗಳಾದರೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ಜೀವಂತ, ಡಾ ರಾಜ್ ಕುಮಾರ್ 16ನೇ ಪುಣ್ಯತಿಥಿ

ಬೆಂಗಳೂರು: 

ಇಂದು ಮಂಗಳವಾರ(ಏಪ್ರಿಲ್ 12) ಕನ್ನಡದ ವರನಟ, ನಟ ಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರ ಪುಣ್ಯತಿಥಿ. ಕನ್ನಡಿಗರನ್ನು ಅವರು ಅಗಲಿ ಇಂದಿಗೆ 16 ವರ್ಷಗಳಾಗಿವೆ.ಅವರು ನಟಿಸಿದ ಚಿತ್ರಗಳು, ಅವರ ಆದರ್ಶ ಗುಣಗಳು, ಸಮಾಜಮುಖಿ ಕೆಲಸಗಳು ಮಾತ್ರ ಜೀವಂತವಾಗಿವೆ.

ಇಂದಿಗೂ ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಹೀಗೆ ಹತ್ತಾರು ಸಮಾಜಮುಖಿ ಕೆಲಸ ಕಾರ್ಯಗಳು ನೆರವೇರುತ್ತಿವೆ.ಇಂದು ಬೆಳಗ್ಗೆಯೇ ಡಾ ರಾಜ್ ಕುಮಾರ್ ಕುಟುಂಬಸ್ಥರು ಕಂಠೀವರ ಸ್ಟುಡಿಯೊ ಬಳಿ ಆಗಮಿಸಿ ಡಾ ರಾಜ್ ಸಮಾಧಿಗೆ ಪೂಜೆ, ನಮನ ಸಲ್ಲಿಸಿದರು. ಅವರ ಮಕ್ಕಳಾದ ಡಾ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಕ್ಕಳು, ಮೊಮ್ಮಕ್ಕಳು ಹಾಜರಿದ್ದರು.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಕಮೀಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣು!

ನಾಡಿನ ಗಣ್ಯರು, ಕಲಾವಿದರು, ರಾಜಕೀಯ ನಾಯಕರು ಡಾ ರಾಜ್ ಕುಮಾರ್ ಅವರನ್ನು ಇಂದು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ನಮ್ಮ ಹೆಸರಿನ ಜೊತೆ ಅವರ ಹೆಸರು ಇರುವುದರಿಂದ ನಾವು ಅವರೊಳಗೆ ಒಂದಾಗಿದ್ದೇವೆ.ತಂದೆಯ ಬಗ್ಗೆ ಮಾತನಾಡದ ದಿನಗಳಿಲ್ಲ.

ಅಮ್ಮ-ಪುನೀತ್ ಕೂಡ ಈಗ ಇಲ್ಲದೆ ನೋವು ಹೆಚ್ಚಾಗಿದೆ. ನೋವಿನ ಮಧ್ಯೆ ಜೀವನ ಮುಂದುವರಿಯಬೇಕು. ಅವರನ್ನು ಜೀವಂತವಾಗಿಡಲು ಅಭಿಮಾನಿಗಳು, ಗಣ್ಯರು, ಚಿತ್ರರಂಗದವರು ಸಹಾಯ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸಗಳು ಆಗುತ್ತಿರಬೇಕು ಎಂದರು.

CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ

ಅಪ್ಪಾಜಿ ತೀರಿಕೊಂಡು ಇಷ್ಟು ವರ್ಷಗಳಾದ ಮೇಲೆಯೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ಹಾಗೆಯೇ ಇದೆ, ಅಭಿಮಾನಿಗಳಿಂದ ಅಪ್ಪಾಜಿಗೆ ಪೂಜೆ ಸಲ್ಲಿಸುವುದು ನಿಜವಾದ ಪ್ರೀತಿ ಸಲ್ಲಿಕೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.ನಂತರ ಸಮಾಧಿಗೆ ಭೇಟಿ ನೀಡಿದವರಿಗೆ ಡಾ ರಾಜ್ ಕುಮಾರ್ ಕುಟುಂಬಸ್ಥರಿಂದ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap