ಬೆಂಗಳೂರು:
ಸಿಲಿಕಾನ್ ಸಿಟಿ ಬೆಂಗಳೂರಿಗೆ ಚಾಲಕರಹಿತ ಮೆಟ್ರೋ ಬೋಗಿ ಬಂದಿದ್ದು, ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ.
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಈ ರೈಲು ಓಡಿಸಲು ಯೋಜನೆ ರೂಪಿಸಿದ್ದು, ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು. ಒಟ್ಟು ಮೂರು ಲಾರಿಗಳಲ್ಲಿ 6 ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳು ಬುಧವಾರ ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದ್ದು ಚಿತ್ರಗಳನ್ನು ಸಹ ಪೋಸ್ಟ್ ಮಾಡಿದೆ.
ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳನ್ನು ತಯಾರು ಮಾಡಲು ಚೀನಾ ಮೂಲದ CRRC Nanjing Puzhen Co Ltd. T ಟೆಂಡರ್ ಪಡೆದಿತ್ತು. ಈ ಬೋಗಿಗಳು ತಯಾರಾದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಚೀನಾಕ್ಕೆ ತೆರಳಿ, ಅವುಗಳನ್ನು ಪರಿಶೀಲಿಸಿದ್ದರು. ಬಳಿಕ ಭಾರತಕ್ಕೆ ತರುವ ಪ್ರಕ್ರಿಯೆ ಆರಂಭವಾಯಿತು. 6 ಬೋಗಿಯ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿದ್ದವು. ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದ್ದವು. ಅಲ್ಲಿನ ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಬೃಹತ್ ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿ ತರಲಾಗಿದೆ. ಈ ಮೂಲಕ ಬೆಂಗಳೂರು ನಗರಕ್ಕೆ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಆಗಮನವಾಗಿದೆ.
ಚೆನ್ನೈ ಬಂದರಿನ ಕಸ್ಟಮ್ಸ್ ಕೋಚ್‌ಗಳನ್ನು ಎತ್ತಲು ಅಗತ್ಯವಾದ ನಿರ್ಣಾಯಕ ಸಲಕರಣೆಗಳ ಕ್ಲಿಯರೆನ್ಸ್ ಅನ್ನು ವಿಳಂಬಗೊಳಿಸಿದ್ದರಿಂದ, ಬೆಂಗಳೂರಿಗೆ ಚಾಲಕ ರಹಿತ ಬೋಗಿ ಪ್ರವೇಶ ಗುರುವಾರಕ್ಕೆ ಮುಂದೂಡಿಕೆಯಾಗಿತ್ತು. ಆದಾಗ್ಯೂ, ಮಂಗಳವಾರ ರಾತ್ರಿ 8 ಗಂಟೆಗೆ ಕಸ್ಟಮ್ಸ್ ತೆರವು ಬಂದಿದ್ದು, ಇದೀಗ ಬೋಗಿ ಬೆಂಗಳೂರಿಗೆ ಆಗಮಿಸಿದೆ.
ಕೋಚ್‌ಗಳು (ಸಂವಹನ ಆಧಾರಿತ ರೈಲು ನಿಯಂತ್ರಣ) ಜನವರಿ 24 ರಂದು ಶಾಂಘೈ ಬಂದರಿನಿಂದ MV ಸ್ಪ್ರಿಂಗ್ ಮೋಟಾದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದವು. ಫೆಬ್ರವರಿ 6 ರಂದು ಚೆನ್ನೈ ತಲುಪಿ ಮತ್ತು ಫೆಬ್ರವರಿ 10 ರಂದು ಚೆನ್ನೈ ಬಂದರಿನಲ್ಲಿ ಕಸ್ಟಮ್ಸ್ ತೆರವುಗೊಳಿಸಿತ್ತು. ಪ್ರತಿಯೊಂದು 38.7 ಟನ್ ತೂಕದ ಬೋಗಿಗಳು ಅದೇ ರಾತ್ರಿ ಬೆಂಗಳೂರಿನ ಕಡೆಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದವು” ಎಂದು ಯುನಿಟ್ರಾನ್ಸ್ ಶಿಪ್ಪಿಂಗ್ ಮತ್ತು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಪ್ರತಿನಿಧಿ ಹೇಳಿದ್ದಾರೆ. ಇದು ಚೀನೀ ಕಂಪನಿ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋಗಾಗಿ ಕೆಲಸ ಮಾಡುವ ಶಿಪ್ಪಿಂಗ್ ಸಂಸ್ಥೆಯಾಗಿದೆ.
ಹಗಲಿನ ವೇಳೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಟ್ರೈಲರ್‌ಗಳಲ್ಲಿ ಸಾಗಿಸಲಾದ ಕೋಚ್‌ಗಳು ರಾತ್ರಿಯಲ್ಲಿ ಮಾತ್ರ ಪ್ರಯಾಣಿಸಬಹುದು. ಹೀಗಾಗಿ ಕೋಚ್ ಗಳು ಹಗಲಿನ ವೇಳೆ ಕಾಂಚಿಪುರಂ, ವೆಲ್ಲೂರು ಮತ್ತು ಕೃಷ್ಣಗಿರಿಯಲ್ಲಿ ನಿಂತಿದ್ದವು. ಈ ಕುರಿತು ಮಾತನಾಡಿರುವ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, ‘ಟ್ರಾಲರ್‌ಗಳು ಗಂಟೆಗೆ ಸರಾಸರಿ 25-30 ಕಿಮೀ ವೇಗದಲ್ಲಿ ಚಲಿಸುತ್ತವೆ. ಬೆಳಗ್ಗೆ 3 ಗಂಟೆಗೆ ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.
ಅಂತೆಯೇ ಬುಧವಾರದ ಬೆಳ್ಳಂಬೆಳಗ್ಗೆ ಬೋಗಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ” ಎಂದು ಸರಕು ಸಾಗಣೆದಾರರಾದ ಟೋಟಲ್ ಮೂವ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಚರಣೆಯ ಉಸ್ತುವಾರಿ ಕೇಶವ್ ಎಸ್ ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ