ಭಾರಿ ಮಳೆಗೆ ತತ್ತರಿಸಿದ ದುಬೈ….!

ದುಬೈ:

    ಏಪ್ರಿಲ್ ತಿಂಗಳಲ್ಲಿ ತೀವ್ರ ಶಾಖದ ಅಲೆಯನ್ನು ಎದುರಿಸಿದ ದುಬೈ ಸದ್ಯ ದಾರಾಕಾರ ಮಳೆಗೆ ತತ್ತರಿಸಿದೆ. ಗುರುವಾರ (ಮೇ 2) ಮುಂಜಾನೆಯಿಂದ ಅಬುಧಾಬಿ ಮತ್ತು ದುಬೈನಲ್ಲಿ ಚಂಡಮಾರುತದೊಂದಿಗೆ ಭಾರೀ ಮಳೆ ಸುರಿಯುತ್ತಿದೆ.

     ಅಧಿಕ ಮಳೆಯಿಂದಾಗಿ ಎಲ್ಲೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮನೆ, ರಸ್ತೆ, ವಾಹನಗಳು ಜಲಾವೃತಗೊಂಡಿವೆ. ಮೊಣಕಾಲೆತ್ತರಕ್ಕೆ ನೀರು ಉಕ್ಕಿ ಹರಿಯುತ್ತಿದೆ. ಈ ಕಾರಣದಿಂದಾಗಿ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು ದುಬೈನಲ್ಲಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಖಲೀಜ್ ಟೈಮ್ಸ್ ಪ್ರಕಾರ, ದುಬೈಗೆ ಒಳಬರುವ ಐದು ವಿಮಾನಗಳನ್ನು ರಾತ್ರಿಯಿಡೀ ತಿರುಗಿಸಲಾಯಿತು. ಜೊತೆಗೆ ಒಂಬತ್ತು ಆಗಮನ ಮತ್ತು ನಾಲ್ಕು ಹೊರಹೋಗುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಎಮಿರೇಟ್ಸ್‌ನ ಹಲವು ವಿಮಾನಗಳನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. 

    ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಮೋಡ ಆವರಿಸಿತ್ತು. ಹೀಗಾಗಿ ದೇಶದ ಹವಾಮಾನ ಇಲಾಖೆ ಅಂಬರ್ ದಾರಕಾರಾ ಮಳೆಯ ಅಲರ್ಟ್ ಘೋಷಿಸಿತ್ತು. ಆದರೆ ನಿರೀಕ್ಷೆಗೂ ಮೀರಿದ ಮಳೆಯಾಗುತ್ತಿರುವುದರಿಂದ ದುಬೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ಹವಾಮಾನ ಮೇ 3ರವರೆಗೆ ದೇಶದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಹೀಗಾಗಿ ಜನರು ತಮ್ಮ ಮನೆಗಳಲ್ಲಿ ಇರುವಂತೆ ಇಲಾಖೆ ಮನವಿ ಮಾಡಿದೆ. 

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಅಬುಧಾಬಿಯ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಜೆಬೆಲ್ ಅಲಿ, ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ಇಂಡಸ್ಟ್ರಿಯಲ್ ಸಿಟಿ, ದುಬೈ ಇನ್ವೆಸ್ಟ್‌ಮೆಂಟ್ ಪಾರ್ಕ್ ಮತ್ತು ಜುಮೇರಾ ವಿಲೇಜ್ ಟ್ರಯಾಂಗಲ್‌ನಲ್ಲಿ ಬಲವಾದ ಗಾಳಿ ಬೀಸುತ್ತಿದೆ.   

    ಬುಧವಾರ ದುಬೈ ವಿಮಾನ ನಿಲ್ದಾಣಗಳು ಮತ್ತು ಎರಡು ಸ್ಥಳೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಈ ಬಗ್ಗೆ ಸಲಹೆಗಳನ್ನು ನೀಡಿವೆ. ಇದರಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಪ್ರಯಾಯಾಣಿಕರು ವಿಳಂಬದ ಬಗ್ಗೆ ಗಮನಿಸಬೇಕು ಎಂದು ಹೇಳಲಾಗಿದೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap