ವಿಧಾನಸಭಾ ಚುನಾವಣೆ : ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್..!

ನವದೆಹಲಿ: 

      ಡಿಸೆಂಬರ್‌ 15ರೊಳಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಾಗಿ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್‌ ಶನಿವಾರ ಪ್ರಕಟಿಸಿದರು. 

      ಛತ್ತೀಸ್‌ಗಢದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, ನ. 12 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ನ. 12ರಂದು ಚುನಾವಣೆ ನಡೆಯಲಿದೆ. ನ. 20 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.   

      ಮಧ್ಯಪ್ರದೇಶ ಮತ್ತು ಮಿಝೋರಾಂನಲ್ಲಿ ಒಂದೇ ಹಂತದಲ್ಲಿ ನ. 28 ರಂದು ಮತದಾನ ನಡೆಯಲಿದೆ. ತೆಲಂಗಾಣದಲ್ಲಿ ರಾಜಸ್ಥಾನದಲ್ಲಿ ಡಿ. 7 ರಂದು ಚುನಾವಣೆ ನಡೆಯುತ್ತದೆ. ಡಿ. 11ಕ್ಕೆ ಎಲ್ಲ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ. 

      ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಸುದ್ದಿಗೋಷ್ಟಿ 3 ಗಂಟೆಗೆ ಮುಂದೂಡಲ್ಪಟ್ಟಿರುವುದಕ್ಕೆ ಚುನಾವಣಾ ಆಯೋಗ ಕ್ಷಮೆ ಕೋರಿದೆ. 

ಶನಿವಾರದಿಂದಲೇ ರಾಜಕೀಯ ಪಕ್ಷಗಳು ಅನುಸರಿಸಬೇಕಾದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ