ನವದೆಹಲಿ:
ಬೆಂಗಳೂರು ಮತ್ತು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದು ದಾಳಿ ವೇಳೆ ಡಿಜಿಟಲ್ ಸಾಧನಗಳು, 1.5 ಕೋಟಿ ರೂಪಾಯಿ ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಇಂದು ಮಾಹಿತಿ ನೀಡಿದೆ.
ಆಗಸ್ಟ್ 9-10 ರಂದು ಬೆಂಗಳೂರಿನ ಕೆಐಎಡಿಬಿ ಪ್ರಧಾನ ಕಚೇರಿ ಮತ್ತು ಧಾರವಾಡದ ಪ್ರಾದೇಶಿಕ ಕಚೇರಿ ಸೇರಿದಂತೆ ಬೆಂಗಳೂರು ಮತ್ತು ಧಾರವಾಡದ 10ಕ್ಕೂ ಕಡೆ ದಾಳಿ ನಡೆಸಿತ್ತು.
ಪ್ರಮುಖ ಆರೋಪಿ ವಿಡಿ ಸಜ್ಜನ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು ನಂತರ ಪೊಲೀಸ್ ಪ್ರಕರಣವನ್ನು ಧಾರವಾಡದ ಸಿಐಡಿಗೆ ಹಸ್ತಾಂತರಿಸಲಾಯಿತು.
ಸಜ್ಜನ್ ಹಾಗೂ ಇತರ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಕೈಜೋಡಿಸಿ 19.9 ಕೋಟಿ ಪರಿಹಾರ ವಿತರಿಸಿದ್ದಾರೆ. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇದೇ ವಿಧಾನ ಬಳಸಿ ಅಧಿಕಾರಿಗಳು ಈ ಹಿಂದೆ 72.55 ಕೋಟಿ ಪರಿಹಾರ ನೀಡಿರುವ ಬಗ್ಗೆಯೂ ನಿರ್ದೇಶನಾಲಯ ಮಾಹಿತಿ ಕಲೆ ಹಾಕಿದೆ.
‘ಕ್ರಿಮಿನಲ್’ ಎಲೆಕ್ಟ್ರಾನಿಕ್, ಡಿಜಿಟಲ್ ದಾಖಲೆಗಳು, ದಾಖಲೆಗಳು ಮತ್ತು 1.5 ಕೋಟಿ ರೂಪಾಯಿ ನಗದು ದಾಳಿಯಲ್ಲಿ ಪತ್ತೆಯಾಗಿದೆ. ಸಜ್ಜನ್ ಹೆಸರಿನಲ್ಲಿದ್ದ 55 ಲಕ್ಷ ರೂಪಾಯಿ ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.