ಅಕ್ರಮ ಹಣ ವರ್ಗಾವಣೆ : ಸಂಸದನ ಮನೆ ಮೇಲೆ ಇಡಿ ದಾಳಿ

ಚೆನ್ನೈ:

     ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮತ್ತು ಅವರ ಪುತ್ರನಾಗಿರುವ ಸಂಸದ ಗೌತಮ್ ಸಿಗಮಣಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ರಾಜ್ಯದ ರಾಜಧಾನಿ ಚೆನ್ನೈನಲ್ಲಿ ಮತ್ತು ವಿಲ್ಲುಪುರಂನಲ್ಲಿರುವ ತಂದೆ-ಮಗನ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.  ಪೊನ್ಮುಡಿ ರಾಜ್ಯ ಗಣಿಗಾರಿಕೆ ಸಚಿವರಾಗಿದ್ದಾಗ (2007 ಮತ್ತು 2011 ರ ನಡುವೆ) ನಡೆದ ಅಕ್ರಮ ಹಾಗೂ ಕ್ವಾರಿ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ