ಹೈದರಾಬಾದ್:

ತೆಲಂಗಾಣ ಹಾಲಿ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ತಮ್ಮದೇ ಆದ ಕಾರು ಕೂಡ ಇಲ್ಲ ಎಂದು ಅವರೇ ತಮ್ಮ ಸ್ವಂತಕ್ಕೆ ಯಾವುದೇ ಕಾರಿಲ್ಲ ಎಂದು ಚುನಾವಣಾ ನಾಮಪತ್ರದ ಜೋತೆಗೆ ನೀಡುವ ಆಸ್ತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳೀದು ಬಂದಿದೆ.
ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ನಾಮಪತ್ರ ಸಲ್ಲಿಕೆ ಮಾಡಿದ್ದು ಜಿಲ್ಲಾಧಿಕಾರಿ ಸ್ಮಿತಾ ಸಬರ್ವಾಲ್ ಅವರಿಗೆ ಕೆಸಿಆರ್ ನಾಮಪತ್ರದ ಜೊತೆಗೆ ಆಸ್ತಿ ಘೋಷಣೆ ಕುರಿತ ಪ್ರಮಾಣಪತ್ರವನ್ನೂ ಸಲ್ಲಿಕೆ ಮಾಡಿದ ಅವರು ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿರುವ ಕೆಸಿಆರ್ ತಮ್ಮ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಸುಮಾರು 16 ಎಕರೆ ಕೃಷಿ ಭೂಮಿ ಇದ್ದು, ಸ್ವಂತ ಮನೆ ಇದೆ ಎಂದು ಹೇಳಿಕೊಂಡಿದ್ದಾರೆ ಆದರೆ ಸರ್ಕಾರಿ ವಾಹನ ಬಿಟ್ಟರೆ ಬೇರ ಯಾವ ವಾಹನವೂ ಇಲ್ಲಾ ಎಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
