ನಕಲಿ ದಾಖಲೆ ಸೃಷ್ಟಿಸಿ ಈದ್ಗಾ ಮೈದಾನ ಮಾರಾಟ :ಗೊತ್ತಿದ್ದೂ ಸಹಕರಿಸಿದರಾ ತಹಶಿಲ್ದಾರ??

ಖಾನಾಪುರ:

    ತಾಲೂಕಿನ ಪಾರಿಶ್ವಾಡ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಈದ್ಗಾ ಮೈದಾನದ ಸರ್ವೇ ನಂ21ರ 4ಎಕರೆ 12ಗುಂಟೆ ಜಮೀನನ್ನು ಕಳೆದ 200 ವರ್ಷಗಳಿಂದ ಸಮುದಾಯದ್ದು ಮುಸ್ಲಿಂ ಸಮುದಾಯದ ಮುಖಂಡರು ಸಮುದಾಯದ ಪ್ರಾರ್ಥನೆಗೆಂದು ಮೀಸಲಿಡಲಾಗಿತ್ತು.

    200 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ಒಬ್ಬ ಮುಖಂಡನ ಹೆಸರಿನಲ್ಲಿ ಎಲ್ಲ ಸಮುದಾಯದ ಒಪ್ಪಿಗೆ ಮೇರೆಗೆ ನೊಂದಾಯಿಸಲಾಗಿತ್ತು ಅದರಂತೆ ಜಮೀನಿನ ಜವಾಬ್ದಾರಿ ತಲೆಮಾರುಗಳಿಂದ ಆ ಕುಟುಂಬವೇ ನೋಡಿಕೊಳ್ಳುತ್ತಾ ಬಂದಿತ್ತು ಆದರೆ ಈಗ ಆ ಕುಟುಂಬದ ಮೂರನೆ ತಲೆಮಾರಿನ ವ್ಯಕ್ತಿ ಜಮೀನು ತಮಗೆ ಸೇರಿದ್ದೆಂದು ಸುಳ್ಳು ಹೇಳಿ ಆತನ ಮಕ್ಕಳು ಅವನಿಂದ ಸಿಹಿ ಮಾಡಿಸಿಕೊಂಡು ಬೇರೆಯವರಗೆ ಮಾರಾಟ ಮಾಡಿದ್ದಾರೆ.ಅಲ್ಲದೇ ನೂರಾರು ವರ್ಷಗಳಿಂದ ಅಲ್ಲಿ ಈದ್ಗಾ ಕಟ್ಟಡ ಕೂಡಾ ಇದ್ದು ನಮ್ಮ ಪೂರ್ವಜರು ನಾವು ಅಲ್ಲೇ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದೇವೆ ಆದರೆ ಈಗ ತಹಶಿಲ್ದಾರರ ನಡೆ ನಮಗೆಲ್ಲ ಅಚ್ಚರಿ ತರಿಸಿದೆ ಆದ್ದರಿಂದ ನಾವು ತಕರಾರು ಸಲ್ಲಿಸಿದ್ದೇವೆ.

    ಇದನ್ನರಿತ ತಹಶಿಲ್ದಾರರು ತರಾತುರಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ಖರೀದಿಗೆ ಒಪ್ಪಿಗೆ ಸೂಚಿಸಿದ್ದಾರೆ ಮತ್ತು ಪಹಣಿಯಲ್ಲಿ ಇದು ಇನಾಮ್ ಭೂಮಿಯೆಂದು ಸ್ಪಷ್ಟವಾಗಿ ನಮೂದಿಸಿದ್ದರೂ ತಹಶಿಲ್ದಾರ ಖರೀದಿಗೆ ಹೇಗೆ ಒಪ್ಪಿಗೆ ಕೊಟ್ಟರು ಎನ್ನುವದು ಮುಖಂಡರ ಪ್ರಶ್ನೆಯಾಗಿದೆ.

    ಅದಿಕಾರಿಗಳು ತರಾತುರಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಜಮೀನು ಖರೀದಿ ಮಾಡಿಸಿ ನಮ್ಮ ಜಮಾತಗೆ ಅನ್ಯಾಯ ಮಾಡಿದ್ದಾರೆ ಎಂದು ಪಾರಿಶ್ವಾಡ ಗ್ರಾಮದ ಸುತ್ತು ಮುತ್ತಲಿನ ಮುಸ್ಲಿಂ ಸಮುದಾಯದವರು ಆರೋಪಿಸಿದ್ದಾರೆ ಅಲ್ಲದೇ ಸುತ್ತ 14 ಗ್ರಾಮಗಳಿಗೆ ಸೇರಿರುವ ಪುರಾಣಿತ ಐತಿಹಾಸಿಕ ಸ್ಥಳವಾಗಿರುವ ಈ ಇದ್ಗಾ ಮೈದಾನದ ಯಾವುದೇ ಪುರಾವಿ ವಂಶಾವಳಿ ದಾಖಲೆ ಇಲ್ಲದೆ ಅಪರಿಚಿತ ವ್ಯಕ್ತಿಗಳು ತಮ್ಮ ಮನಸ್ಸಿಗೆ ಬಂದಂತೆ ಮಾರಾಟ ಮಾಡಿಕೊಂಡು ಸಂಪೂರ್ಣ ದಾಖಲೆಗಳನ್ನು ಸುಳ್ಳು ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವುದಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮುಖಂಡರು ಆರೋಪಸಿದ್ದಾರೆ. ಈ ಈದ್ಗಾ ಮೈದಾನ ತಲೆಮಾರುಗಳಿಂದ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಮೀನಾಗಿದೆ ಇದೆಲ್ಲಾ ಗೊತ್ತಿತ್ತು ಅಧಿಕಾರಿಗಳು ಇಂತಹ ಕೆಲಸ ಮಾಡಿದ್ದಾರೆಂದರೆ ಇಲ್ಲ ಅಧಿಕಾರಿಗಳು ಯಾವುದೋ ಆಮೀಷಕ್ಕೊಳಗಾಗಿದ್ದು ಕಂಡುಬರುತ್ತಿದ್ದು ಕಾರಣ ಸಂಬಂಧಪಟ್ಟ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿ ಸುಳ್ಳು ಖರೀದಿ ಕರಾರು ಪತ್ರ ರದ್ದುಗೊಳಿಸಬೇಕು ಮತ್ತು ಸಮಸ್ತ ಇಸ್ಲಾಂ ಬಂಧುಗಳಿಗೆ ನ್ಯಾಯ ಒದಗಿಸಬೇಕು.- ಸಂದೀಪ ಚಲವಾದಿ ತಾಲೂಕು ಅಧ್ಯಕ್ಷರು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಖಾನಾಪುರ

 ಇದು ಖಾಸಗಿಯವರಿಗೆ ಸೇರಿದ ಜಮಾನಾಗಿದ್ದು ಇದರ ಖಾತೆ ಬದಲಾವಣೆಗೆ ಯಾವುದೇ ತರಹದ ಸಮಸ್ಯೆ ನಮಗೆ ಕಾಣಿಸಿಲ್ಲ ಹಾಗೇನಾದ್ರೂ ಇದ್ರೆ ಅದನ್ನ ತೆಗೆದುಕೊಳ್ಳುವವರು ಗಮನಿಸಬೇಕಾಗಿತ್ತು ಈಗ ಅದಕ್ಕೆ ಸಂಬಂದಪಟ್ಟವರು ತಕರಾರು ಸಲ್ಲಿಸಿದ್ದು ತನಿಖೆ ನಂತರ ಜಮೀನು ಯಾರಿಗೆ ಸೇರಿದ್ದು ಎಂದು ತಿಳಿದುಬರಲಿದೆ.- ಪ್ರಕಾಶ ಗಾಯಕ್ವಾಡ ,ತಹಶಿಲ್ದಾರ ಖಾನಾಪುರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap