ಭಟ್ಕಳ :
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪಟ್ಟಣದ ಅಂಗಡಿಯೊಂದರ ಮೇಲೆ ದಾಳಿ ಮಾಡಿ ದಾಸ್ತಾನ ಇಟ್ಟಿದ್ದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್,ನಿಕೋಟಿನ್ ನ್ನು ವಶಪಡಿಸಿಕೊಂಡ ಘಟನೆ ಸೆಪ್ಟೆಂಬರ್ ಒoದರಂದು ನಡೆದಿದೆ.ಭಟ್ಕಳದ ಬಂದರ ರೋಡ ಮುಗುದುಮ್ ಕಾಲೋನಿಯ ನಿವಾಸಿ ಮಕ್ಬುಲ್ ಇಸ್ಮಾಯಿಲ್ ಮಡಿಕಲ್ ಎಂಬಾತನ ಹೂವಿನ ಚೌಕದ ಟೌನ್ ಸೆಂಟರನ ರಿಮ್ಸ್ ಅಂಗಡಿ ಮೇಲೆ ದಾಳಿ ನಡೆಸಿ 2.39 ಲಕ್ಷ ರೂ ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಭಟ್ಕಳ ಪೊಲೀಸ್ ಉಪಾದೀಕ್ಷಕ ಮಹೇಶ್ ಎಂ ಕೆ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ ಪಿ ಎಂ ನೇತೃತ್ವದಲ್ಲಿ ಪಿಎಸ್ಐ ಗಳಾದ ನವೀನ್ ಎಸ್ ನಾಯ್ಕ್ ಹಾಗೂ ತಿಮ್ಮಪ್ಪ ಎಸ್ ಕಾರ್ಯಚರಣೆ ನಡೆಸಿದ್ಧರು ಎಂದು ಪ್ರಕಟಣೆ ತಿಳಿಸಿದೆ.








