ಒಂದು ಇಮೇಲ್‌ನಿಂದ ಬುಡಮೇಲಾಯ್ತು ಎಂಬಿಎ ಪದವೀಧರನ ಬದುಕು….!

ಬೆಂಗಳೂರು

   “ಭಾರತದ ಸಿಲಿಕಾನ್ ವ್ಯಾಲಿ”, ” ಐಟಿ ರಾಜಧಾನಿ” ಎಂಬ ಬಿರುದು ಪಡೆದ ಬೆಂಗಳೂರು, ನಾವೀನ್ಯತೆಯು ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಜಾಗತಿಕ ಟೆಕ್ ದೈತ್ಯರಿಂದ ಹಿಡಿದು ಸ್ಟಾರ್ಟ್‌ಅಪ್‌ಗಳವರೆಗೆ, ಇದು ಅಂತ್ಯವಿಲ್ಲದ ಅವಕಾಶಗಳು ಮತ್ತು ಕನಸುಗಳ ಕೇಂದ್ರವಾಗಿದೆ.

   ಇಂತಹ ಕನಸಿನ ನಗರಿಯ ಹಿಂದೆ ಅನೇಕ ಕಹಿಸತ್ಯಗಳಿವೆ. ಐಟಿ ವಲಯದಲ್ಲಿ ತಲೆತೋರುತ್ತಿರುವ ಬಿಕ್ಕಟ್ಟಿನ ನಡುವೆ ಇತ್ತೀಚೆಗೆ ಉದ್ಯೋಗಿಗಳ ಲೇ ಆಫ್ ಗಳು ಹೆಚ್ಚುತ್ತಿವೆ. ಇದರಿಂದ ಅನೇಕರ ಬದುಕಿನ ಹಳಿ ತಪ್ಪುತ್ತಿದೆ.

   ಅದೆಷ್ಟೋ ಕನಸು ಹೊತ್ತು ಉದ್ಯೋಗ ಭರವಸೆಯಿಂದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಉದ್ಯೋಗಿಗಳು ಏಕಾಏಕಿ ಉದ್ಯೋಗ ಕಳೆದುಕೊಂಡರೆ ಅವರ ಮುಂದಿನ ಜೀವನ ಹೇಗಿರಬೇಡ ಹೇಳಿ. ರೆಡ್ಡಿಟ್ ಹಂಚಿಕೊಂಡ ಇಂತಹ ಒಂದು ಬರಹ ಎಂಬಿಎ ಪದವೀಧರ ಮತ್ತು ಐಟಿ ವೃತ್ತಿಪರರ ದುರವಸ್ಥೆಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡ ನಂತರ, ವ್ಯಕ್ತಿಯೊಬ್ಬರ ಬದಲಾದ ಬದುಕು ಮತ್ತು ಬರಿಗೈನಲ್ಲಿ ಮರಳಿ ಊರು ಸೇರುವ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ತಮ್ಮ ಬರಹದಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ವಿವರಿಸಿದ್ದಾರೆ.

   ರೆಡ್ಡಿಟರ್ ಬೆಂಗಳೂರಿನ ಕೆಆರ್ ಪುರಂನಲ್ಲಿರುವ ತಮ್ಮ ಸಂಬಂಧಿಯ ಬಾಡಿಗೆದಾರರ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಬರಹದ ನಾಯಕ, ಬಾಡಿಗೆದಾರರು ಇಂಜಿನಿಯರಿಂಗ್ ಮತ್ತು MBA ಪದವೀಧರರಾಗಿದ್ದು ಬೆಂಗಳೂರಿನ ಉನ್ನತ ಯುನಿಕಾರ್ನ್ ಕಂಪನಿಯಲ್ಲಿ ಉತ್ಪನ್ನ ನಿರ್ವಾಹಕ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿವರೆಗೆ ಅವರ ಜೀವನ ಸುಗಮವಾಗಿ ಸಾಗುತ್ತಿತ್ತು. ಆದರೆ ೨೦೨೪ರ ಏಪ್ರಿಲ್ ನಲ್ಲಿ ಏಕಾಏಕಿ ಸಂಸ್ಥೆ ಒಂದು ಈ ಮೇಲ್ ಮೂಲಕ ವಜಾ ಮಾಡಿತ್ತು. ಒಂದೆಡೆ ಗರ್ಭಿಣಿಯಾಗಿದ್ದ ಅವರ ಪತ್ನಿ ಕೂಡ ಪ್ರಾಡಕ್ಟ್ ಡಿಸೈನರ್ ಕೆಲಸವನ್ನು ತೊರೆದಿದ್ದರು. ಅವರಿಬ್ಬರೂ ನಿರುದ್ಯೋಗಿಗಳಾದ ಕಾರಣ ಜೀವನ ಅಲ್ಲೋಲಕಲ್ಲೋಲವಾಗಿತ್ತು.

      ಮತ್ತೊಂದು ಕೆಲಸಕ್ಕಾಗಿ ಮಾಡಿದ ನಿರಂತರ ಪ್ರಯತ್ನಗಳು ವಿಫಲವಾಯಿತು. ತಿಂಗಳುಗಳು ಕಳೆದಂತೆ, ಇಎಂಐಗಳು, ಶುಲ್ಕಗಳು, ವೈದ್ಯಕೀಯ ಬಿಲ್‌ಗಳು ಮತ್ತು ದೈನಂದಿನ ವೆಚ್ಚಗಳ ಕಾರಣ ಕೈನಲ್ಲಿದ್ದ ಉಳಿತಾಯವು ಕರಗಿಹೋಯಿತು. ಆಗಸ್ಟ್ ವೇಳೆಗೆ ಬಾಡಿಗೆ ಕಟ್ಟಲು ಹಣವಿಲ್ಲದೆ ಕಂಗಾಲಾಗಿ, ತಂದೆ-ತಾಯಿಯೊಂದಿಗೆ ವಾಸವಾಗಲು ಕುಟುಂಬ ಸಮೇತ ಅವರ ಊರಾದ ಮೈಸೂರಿಗೆ ಬರಿಗೈನಲ್ಲಿ ಹಿಂತಿರುಗಬೇಕಾಯಿತು.

   “ಬೆಂಗಳೂರನ್ನು ಹೆಚ್ಚಾಗಿ ಐಟಿ ಕೇಂದ್ರ ಅವಕಾಶಗಳ ಆಗರ ಎಂದು ಹೇಳಲಾಗುತ್ತಿದ್ದರೂ, ಇಲ್ಲಿರುವ ಉದ್ಯೋಗಗಳು ಮೇಲ್ನೋಟಕ್ಕೆ ಕಾಣುವಷ್ಟು ಸುರಕ್ಷಿತವಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಬ್ಯಾಕಪ್ ಯೋಜನೆಗಳನ್ನು ಹೊಂದಿರಲು ಮತ್ತು ಅವರ ಪ್ರಸ್ತುತ ಸ್ಥಾನಗಳ ಮೇಲೆ ಮಾತ್ರ ಅವಲಂಬಿಸಿ ಜೀವನ ಸಾಗಿಸಬಾರದು” ಎಂದು ರೆಡ್ಡಿಟರ್ ಒತ್ತಿ ಹೇಳಿದ್ದಾರೆ.

  ಈ ಬರಹ ಕಾಮೆಂಟ್‌ಗಳಲ್ಲಿ, ಜನ ಉದ್ಯೋಗದ ಬಗೆಗಿನ ಭಯವನ್ನು ವ್ಯಕ್ತಪಡಿಸಿದ್ದು, ಹೆಚ್ಚಿನವರು ಇದೇ ರೀತಿಯ ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಓರ್ವ ಬಳಕೆದಾರರು “ಡ್ಯಾಮ್ ಇದು ನಿಜಕ್ಕೂ ದೊಡ್ಡ ಅಘಾತ ಎಂದಿದ್ರೆ ಮತ್ತೊಬ್ಬರು ತಮ್ಮ ವೃತ್ತಿಜೀವನದ ಹಾದಿಯನ್ನು ಮರುಪರಿಶೀಲಿಸುತ್ತಾ “ನನ್ನ ಪ್ರಾಪಂಚಿಕ ಸ್ತಬ್ದ ಉದ್ಯೋಗದಿಂದ ಸ್ವಲ್ಪ ಪ್ರಗತಿಯನ್ನು ಸಾಧಿಸಲು ನಾನು ಕೋಡಿಂಗ್ ಇತ್ಯಾದಿಗಳನ್ನು ಕಲಿಯಲು ಯೋಚಿಸುತ್ತಿದ್ದೇನೆ ಎಂದಿದ್ದಾರೆ.

   “ಇದರಿಂದ ಯುವಕರು ಪಾಠ ಕಲಿಯಬೇಕಿದೆ. ದಯವಿಟ್ಟು ನಿಮ್ಮ ಖಾತೆಯಲ್ಲಿ ಕನಿಷ್ಠ 6 ತಿಂಗಳ ವೆಚ್ಚ ಭರಿಸಬಲ್ಲ ತುರ್ತು ನಿಧಿಯನ್ನು ಇರಿಸಿ ಜೀವನ ವೇಗದಲ್ಲಿ ಸಾಗುತ್ತದೆ. ನೀವು ಕುಟುಂಬ/ಮಕ್ಕಳು ಜವಬ್ದಾರಿ ಬಂದಾಗ ನಿಮ್ಮ 30 ರ ದಶಕದಲ್ಲಿ ಇದನ್ನು ನಿಭಾಯಿಸುವುದು ತುಂಬಾ ಕಷ್ಟ. ಆದ್ದರಿಂದ, ನಿಮ್ಮ 20 ರ ವಯಸ್ಸಿನಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಉಳಿಸಿ, ನೀವು ಅವಿವಾಹಿತರಾಗಿರುವಾಗ ಇಎಂಐನಲ್ಲಿ ಇತ್ತೀಚಿನ ಐಫೋನ್ ಅನ್ನು ಖರೀದಿಸಲು ಹಣವನ್ನು ವ್ಯರ್ಥ ಮಾಡಬೇಡಿ” ಎಂಬರ್ಥದ ಸಲಹೆಯನ್ನು ಬಳಕೆದಾರರು ಯುವ ಜನತೆಗೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap