ಬೆಂಗಳೂರು:
ಶ್ರೀರಾಕುಂ ಅಂಧ ಮಕ್ಕಳ ಶಾಲೆಯಲ್ಲಿ ಸಂಸ್ಥಪನಾ ದಿನಾಚರಣೆ ಮತ್ತು ಹಳೆಯ ವಿದ್ಯಾರ್ಥಿನಿಯಾಗಿದ್ದ ಭವ್ಯರವರು ಇದೇ ಶಾಲೆಯಲ್ಲಿ ಸಂಪೂರ್ಣ ವ್ಯಾಸಂಗ ಮುಗಿಸಿ ಹೊಸಕೋಟೆಯಲ್ಲಿ ಸಿಟಿ ಮುನ್ಸಿಪಲ್ ಕೌನ್ಸಿಲ್ ನೌಕರಿ ಮಾಡುತ್ತಿದ್ದಾರೆ ಕುಮಾರಿ ಭವ್ಯಳಿಗೆ ಇಂಜನಿಯರ್ ಪದವೀಧರ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಲೋಕೇಶ್ ರವರು ಬಾಳಸಂಗಾತಿಯಾಗಿ ವಿವಾಹ ಸಂಭ್ರಮ ನೇರವೆರಿತು.
ಶ್ರೀ ರಾಕುಂ ಅಂಧ ಮಕ್ಕಳ ಶಾಲೆ ಸಂಸ್ಥಾಪಕ ಸ್ವಾಮಿ ರಾಕುಂಜೀ ಮಹಾರಾಜ್ ರವರು, ಮಾಜಿ ಶಾಸಕಿ ಶ್ರೀಮತಿ ಪ್ರೇಮಿಳಾ ನೇಸರ್ಗಿರವರು, ವಿಧಾನಪರಿಷತ್ ಮಾಜಿ ಸದಸ್ಯರಾದ ಆರ್.ವಿ.ವೆಂಕಟೇಶ್ ರವರು ನೂತನ ವಧು-ವರನಿಗೆ ಶುಭ ಕೋರಿದರು.ಇದೇ ಸಂದರ್ಭದಲ್ಲಿ ಸ್ವಾಮಿ ರಾಕುಂಜೀ ಮಹಾರಾಜ್ ರವರು ಮಾತನಾಡಿ ವಿವಾಹವು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖವಿದೆ. ಗಂಡು, ಹೆಣ್ಣು ಜೀವನವನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು.
ಆಚಾರ್ಯ ಶ್ರೀ ರಾಕುಂ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ 10ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಆಶ್ರಮದ ಸಂಪೂರ್ಣ ವೆಚ್ಚ ಭರಿಸಿ ವಿವಾಹ ನೇರವೆರಿಸಲಾಗಿದೆ.ಆಚಾರ್ಯ ಶ್ರೀ ರಾಕುಂ ವಧು-ವರ ಆನ್ವೇಷಣಾ ಕೇಂದ್ರ ಆರಂಭಿಸಲಾಗಿದೆ ಇಲ್ಲಿ ಉಚಿತವಾಗಿ ನೋಂದಾಣಿ ಮಾಡಿಕೊಳ್ಳಬಹುದು.ನಮ್ಮ ಆಶ್ರಮದ ಯುವಕ, ಯುವತಿಯರನ್ನ ಮದುವೆಯಾದರೆ ನಮ್ಮ ಆಶ್ರಮ ಅವರಣದಲ್ಲಿ ಮದುವೆ ಮಾಡಿಕೊಡಲಾಗುವುದು ಎಂದು ಹೇಳಿದರು.








