ಶಿವಮೊಗ್ಗ
ಆತ್ಮಹತ್ಯೆಗೆ ಶರಣಾದ ಚಂದ್ರಶೇಖರ್ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಈಗ 25 ಲಕ್ಷದ ಚೆಕ್ ನಾಳೆ ಪಡೆಯಲು ಬೆಂಗಳೂರಿಗೆ ಬರೋಕೆ ಹೇಳಿದ್ದಾರೆ. ಇದು ತುಂಬಾ ಸಂತೋಷದ ವಿಚಾರ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಮನೆಗೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಇಂದು ಭೇಟಿ ನೀಡಿದರು. ಭೇಟಿ ಬಳಿಕ ಮಾತನಾಡಿದ ಅವರು, ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಸಿಎಂ ಹೇಳಿದ್ರು, ನಾವು ಕೊಡಲೇಬೇಕು ಎಂದು ಒತ್ತಡ ಹಾಕ್ತೀದ್ವಿ, ಇದೀಗ ನಿಗಮದ ಎಂಡಿ ಚೆಕ್ ತೆಗೆದುಕೊಳ್ಳೋಕೆ ನಾಳೆ ಬೆಂಗಳೂರಿಗೆ ಬರೋಕೆ ಹೇಳಿದ್ದಾರೆ ಎಂದು ಈಶ್ವರಪ್ಪ ಅವರು ಹೇಳಿದರು.
25 ಲಕ್ಷದ ಚೆಕ್ ನಾಳೆ ಪಡೆಯಲು ಬೆಂಗಳೂರಿಗೆ ಬರೋಕೆ ಹೇಳಿದ್ದಾರೆ. ಅಂಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ 8 ಲಕ್ಷ 25 ಸಾವಿರ ಕವಿತಾ ಅವರ ಅಕೌಂಟ್‌ಗೆ ಬಂದಿದೆ. ಕೆಲಸ ಕೊಡುವ ವಿಚಾರದ ಬಗ್ಗೆ ಎಂಡಿ ಅವರಿಗೆ ನಾನು ಕಾಲ್ ಮಾಡಿದ್ದೆ, ಚಂದ್ರಶೇಖರ್ ಮಗನಿಗೆ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಎಂಡಿ ಹೇಳಿದ್ದಾರೆ. ಅವರಿಗೆ ಬರುವಂತಹ ಪೆಕ್ಷನ್ ಕೊಡುವ ವಿಚಾರಕ್ಕೆ ಡಿಸಿ ಅವರು ಕವಿತಾ ಅವರಿಗೆ ಬರೋಕೆ ಹೇಳಿದ್ದಾರೆ. ನಮ್ಮ ಕಾರ್ಯಕರ್ತರ ಪಯತ್ನದಿಂದ ಪರಿಹಾರ ಸಿಕ್ಕಿದೆ. ಇದು ತುಂಬಾ ಸಂತೋಷದ ವಿಚಾರ ಎಂದು ಅವರು ಹೇಳಿದರು.
ರಾಯಣ್ಣ ಬ್ರಿಗೇಡ್ ವಿಚಾರ ಮತ್ತೆ ಮುನ್ನೆಲೆಗೆ ಬಂದ ವಿಚಾರವಾಗಿ ಮಾತನಾಡಿದ ಅವರು, ಕಳೆದವಾರ ಸಂಗೋಳ್ಳಿ ರಾಯಣ್ಣ ಪ್ರಶಸ್ತಿ ಕೊಟ್ಟು ಹುಬ್ಬಳ್ಳಿಯಲ್ಲಿ ನನಗೆ ಸನ್ಮಾನ ಮಾಡಿದ್ರು. ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ನನ್ನ ಬಗ್ಗೆ ಮಾತಾನಾಡಿದ್ರು, ಉದ್ಘಾಟನಾ ಭಾಷೆಯಲ್ಲಿ ಯತ್ನಾಳ್ ಈಶ್ವರಪ್ಪಗೆ ಅನ್ಯಾಯ ಆಗಿದೆ ಅಂತಾ ಹೇಳಿದ್ರು, ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸಿಎಂ ಮಾಡ್ತೀವಿ ಅಂತಾ ಅವರು ಹೇಳಿದ್ದಾರೆ. ನನ್ನ ಬಗ್ಗೆ ಇರುವ ಪ್ರೀತಿ ತೋರಿಸಿದ್ದಾರೆ. ಸಭೆಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಹಾಗೂ ಈಶ್ವರಪ್ಪ ರಾಯಣ್ಣ ಮತ್ತು ಚೆನ್ನಮ್ಮ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ ಅಂತಾ ಹೇಳಿದ್ರು, ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಿ ಅಂತಾ ಇಬ್ಬರಿಗೂ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಅಕ್ಟೋಬರ್ 20 ರಂದು ವಿಶೇಷ ಸಭೆ ಕರೆದಿದ್ದೇವೆ. ಸಭೆಯಲ್ಲಿ ಎಲ್ಲಾ ಸೇರಿ ತೀರ್ಮಾನ ಮಾಡುತ್ತೇನೆ. ಹೆಸರು ಇಡುವ ವಿಚಾರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರು ಶಾಸಕ ಮುನಿರತ್ನ ಬಗ್ಗೆ ಕೇಳಿದ್ದಕ್ಕೆ ಗರಂ ಆದರು. ಒಕ್ಕಲಿಗ ಸಮಾಜ ಶಾಸಕ ಮುನಿರತ್ನ ಕೊಳಕು ಭಾಷೆಗೆ ಖಂಡನೆ ಇದೆ. ಮುನಿರತ್ನ ನಮ್ಮ ಸಮಾಜಕ್ಕೆ, ತಮ್ಮ ಸ್ಥಾನಕ್ಕೆ ಕಳಂಕ ತಂದಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಸಮಾಜದವರು ಬಹುಸಂಖ್ಯಾತರಿದ್ದಾರೆ. ಮುನಿರತ್ನ ಪರವಾಗಿ ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಹಿಂದೆ ನಿರ್ಮಲಾನಂದ ಶ್ರೀಗಳು ಕರೆದು ಬುದ್ಧಿ ಹೇಳಿದರೂ ಕೂಡ ಅವರು ಕೆಟ್ಟ ಬುದ್ಧಿ ಬಿಟ್ಟಿಲ್ಲ. ಈ ಹಿಂದೆ ಉರಿಗೌಡ-ನಂಜೆಗೌಡ ವಿಚಾರದಲ್ಲಿ ಸ್ವಾಮೀಜಿಗಳು ಕರೆದು ಬುದ್ಧಿ ಹೇಳಿದ್ದರು ಎಂದು ಕಿರಿ ಕಾರಿದರು.
ನಮ್ಮ ಸಮಾಜದ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಅವರು ನಮ್ಮ ಸಮಾಜದ ಮಹಿಳೆಯರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೀಳುಮಟ್ಟದ ಭಾಷೆ ಬಳಸಿ ಅಗೌರವ ತೋರಿದ್ದಾರೆ. ನಮ್ಮ ಸಮಾಜದ ಮಹಿಳೆಯರಿಗೆ ಗೌಡ ಎಂದು ಪದ ಪ್ರಯೋಗಿಸಿ ಮಂಚಕ್ಕೆ ಕರೆದಿರುವುದು ಹೇಯಕರ. ರೌಡಿ ಕೊರಂಗು ಸಹೋದರ ಈತ ಮುನಿರತ್ನ. ಈತನ ಸಹೋದರನಾಗಿರುವ ಮುನಿರತ್ನನ ಬಾಯಲ್ಲಿ ಮತ್ತೇನು ಬರುತ್ತೆ. ಈತನ ವಿರುದ್ಧ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ವಿಶೇಷ ತನಿಖಾ ದಳದಿಂದ ತನಿಖೆ ನಡೆಸಲು ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದರು.
ಮುನಿರತ್ನ ವಿರುದ್ಧ ಕ್ರಮ ತೆಗೆದುಕೊಂಡರೆ ಅವಸರದ ಕ್ರಮ ಎಂದು ಟೀಕೆ ಮಾಡುತ್ತಿದ್ದಾರೆ. ಏಡ್ಸ್ ಹರಡಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಈತ ಓಡಿ ಹೋಗಿದ್ದರೆ ಏನು ಮಾಡಬೇಕಿತ್ತು. ಕೂಡಲೇ ಮುನಿರತ್ನ ಪರವಾಗಿ ಮಾತನಾಡಿದವರು ಕೂಡಲೇ ಒಕ್ಕಲಿಗ ಸಮಾಜಕ್ಕೆ ಕ್ಷಮೆ ಕೋರಬೇಕು. ಕೂಡಲೇ ಈತನ ಅನಾಚಾರ ಮಟ್ಟ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.