ಪ್ರತಿಯೊಬ್ಬ ಪಾಪಿಗೂ ಭವಿಷ್ಯವಿದೆ; ಅತ್ಯಾಚಾರ ಆರೋಪಿಯ ಮರಣ ದಂಡನೆ ರದ್ದುಗೊಳಿಸಿ ʼಸುಪ್ರೀಂʼ ಹೇಳಿಕೆ

        ಮಧ್ಯಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಸ್ಟಿಸ್‌ ಯುಯು ಲಲಿತ್, ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠ, ಸೂಚಿಸಲಾದ ಗರಿಷ್ಠ ಶಿಕ್ಷೆಯು ಯಾವಾಗಲೂ ಅಪರಾಧಿಯ ದುರ್ಬಲ ಮನಸ್ಸನ್ನು ಸರಿಪಡಿಸಲು ನಿರ್ಣಾಯಕ ಅಂಶವಾಗಿರುವುದಿಲ್ಲ ಎಂಬ ನಿರ್ಣಯಕ್ಕೆ ಬಂದಿದೆ.

ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಆರೋಪಿ ಮೊಹಮ್ಮದ್‌ ಫಿರೋಜ್‌ಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜೊತೆಗೆ 7-10 ವರ್ಷಗಳವರೆಗೆ ಕಠಿಣ ಕಾರಾಗೃಹದ ಸಜೆ ನೀಡಿತ್ತು. 2000 ರೂಪಾಯಿ ಜುಲ್ಮಾನೆಯನ್ನೂ ಹಾಕಿತ್ತು. ಶಿಕ್ಷೆಯಿಂದ ವಿನಾಯಿತಿ ಕೋರಿ ಆರೋಪಿ ಸಲ್ಲಿಸಿದ್ದ ಮನವಿಯನ್ನೂ ಟ್ರಯಲ್‌ ಕೋರ್ಟ್‌ ತಿರಸ್ಕರಿಸಿತ್ತು, ಮರಣದಂಡನೆಯನ್ನು ಖಚಿತಪಡಿಸಿತ್ತು.

ಬೆಂಗಳೂರಿನಲ್ಲಿ ಎಎಪಿಯ ಬೃಹತ್‌ ರೈತ ಸಮಾವೇಶ, ಕೇಜ್ರಿವಾಲ್‌ ಸಮ್ಮುಖದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಎಎಪಿ ಸೇರ್ಪಡೆ

ಆರೋಪಿ ಮರಣ ದಂಡನೆಯಿಂದ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಆತನ ವಿರುದ್ಧ ಹೊರೆಸಲಾದ ಅಪರಾಧಗಳಿಗಾಗಿ ಮೇಲ್ಮನವಿದಾರನ ಅಪರಾಧದ ನಿರ್ಣಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ನ್ಯಾಯಾಲಯಗಳು ತೆಗೆದುಕೊಂಡ ದೃಷ್ಟಿಕೋನವನ್ನು ದೃಢೀಕರಿಸುವಾಗ, ಮರಣದಂಡನೆಯನ್ನು ಸರಿದೂಗಿಸುವುದು ಸೂಕ್ತವೆಂದು ಪರಿಗಣಿಸಿದೆ.

ಮತ್ತು ಅದಕ್ಕೆ ಅನುಗುಣವಾಗಿ ಜೀವಾವಧಿ ಶಿಕ್ಷೆಯಾಗಿ ಮರಣದಂಡನೆಯನ್ನು ಬದಲಾಯಿಸಿದೆ. ಐಪಿಸಿ ಸೆಕ್ಷನ್ 376 A, ಪ್ರಕರಣದ ಸತ್ಯಗಳಿಗೂ ಅನ್ವಯಿಸುವುದರಿಂದ, ಮೇಲ್ಮನವಿದಾರರ ಸಹಜ ಜೀವಿತಾವಧಿಯಲ್ಲಿ ಸೆರೆವಾಸದ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಸೂಕ್ತವಾದ ಶಿಕ್ಷೆಯಾಗಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ. ಇಲ್ಲಿ ಆಸ್ಕರ್ ವೈಲ್ಡ್ ಅವರು ಮಾತುಗಳನ್ನು ಉಲ್ಲೇಖಿಸಿದೆ.

ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಸಂತ ಮತ್ತು ಪಾಪಿಗಳ ನಡುವಿನ ಒಂದೇ ವ್ಯತ್ಯಾಸವೆಂದರೆ ಪ್ರತಿಯೊಬ್ಬ ಸಂತನಿಗೆ ಭೂತಕಾಲವಿದೆ ಮತ್ತು ಪ್ರತಿ ಪಾಪಿಗೆ ಭವಿಷ್ಯವಿದೆ, ಎಂಬ ಮಾತು ಅನ್ವಯವಾಗುವಂತೆ ನ್ಯಾಯಪೀಠ ಈ ಪ್ರಕರಣದಲ್ಲಿ ತೀರ್ಪು ನೀಡಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ತಪ್ಪನ್ನು ತಿದ್ದಿಕೊಳ್ಳಲು ಆರೋಪಿಗೆ ಅವಕಾಶ ನೀಡಿದೆ.

ಜೊತೆಗೆ ಇನ್ನು ಮುಂದಾದರೂ ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ಫಿರೋಜ್‌ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್‌ ಆತನ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ವಿಸ್ತರಿಸಿ ತೀರ್ಪು ನೀಡಿದೆ.

 ಬೆಂಗಳೂರು, ಲಾಲ್‌ಬಾಗ್‌ನಲ್ಲಿ ಕ್ಯಾಮರಾ ನಿಷೇಧ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link