ಬೆಂಗಳೂರು:
ಬೆಂಗಳೂರು, ಏಪ್ರಿಲ್ 21; ಉದ್ಯಾನ ನಗರಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮರಾ ನಿಷೇಧ ಮಾಡಲಾಗಿದೆ. ಕಳೆದವಾರ ಜೋಡಿಯೊಂದು ಕ್ಯಾಮರಾ ತೆಗೆದುಕೊಂಡು ಹೋಗಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿತ್ತು, 500 ರೂ. ದಂಡ ಕಟ್ಟಿದ್ದರು.
ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮರಾ ನಿಷೇಧ ಮಾಡುವ ಪ್ರಸ್ತಾವನೆಯನ್ನು ಸಲಹಾ ಸಮಿತಿ ಮುಂದೆ ತರಲಾಗಿತ್ತು.ಸಮಿತಿ ಒಪ್ಪಿಗೆ ನೀಡಿದ ಮೇಲೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಡಿಜಿಟಲ್ ಕ್ಯಾಮರಾವನ್ನು ಲಾಲ್‌ಬಾಗ್ ಒಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ 500 ರೂ. ದಂಡ ವಿಧಿಸಲಾಗುತ್ತದೆ.ಲಾಲ್‌ಬಾಗ್ ಒಳಗೆ ಡಿಜಿಟಲ್ ಕ್ಯಾಮರಾ ಬಳಕೆಯಿಂದ ಹಕ್ಕಿಗಳಿಗೆ ಮತ್ತು ಜೇನುಗಳಿಗೆ ಸಮಸ್ಯೆಯಾಗುತ್ತಿದೆ. ಕ್ಯಾಮರಾ ಫ್ಲಾಷ್‌ನಿಂದಾಗಿ ಜೇನು ಹುಳುಗಳು ಎದ್ದು ದಾಳಿ ನಡೆಸುವ ಸಾಧ್ಯತೆ ಇದೆ. 2015 ಮತ್ತು 2016ರಲ್ಲಿ ಉದ್ಯಾನದಲ್ಲಿ ಜೇನು ದಾಳಿ ನಡೆಸಿದ ಪ್ರಕರಣಗಳು ನಡೆದಿದ್ದವು.
ಪ್ರವಾಸೋದ್ಯಮ ಇಲಾಖೆಯಿಂದ ಹಂಪಿ ಬಳಿ 28.20 ಕೋಟಿ ರೂ.ವೆಚ್ಚದ ವಿಶ್ವದರ್ಜೆಯ ತ್ರಿಸ್ಟಾರ್ ಹೊಟೇಲ್
ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿದ್ದು, ಹಲವಾರು ವರ್ಷಗಳಿಂದ ಡಿಜಿಟಲ್ ಕ್ಯಾಮರಾ ನಿಷೇಧ ಮಾಡಬೇಕು ಎಂಬ ಪ್ರಸ್ತಾವನೆ ಇತ್ತು. ಲಾಲ್‌ಬಾಗ್ ಒಳಗೆ ಕ್ಯಾಮರಾ ಬಳಕೆ ಮಾಡುವು ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಸೇರಿದಂತೆ ಇತರ ಫೋಟೋ ಶೂಟ್ ನಡೆಯುವ ಕುರಿತು ದೂರುಗಳು ಬಂದಿದ್ದವರು ಎಂದು ಹೇಳಿದ್ದಾರೆ.
ಐಪಿಎಲ್ ಪಾಯಿಂಟ್ ಟೇಬಲ್ ಹೇಗಿದೆ?. ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
ಲಾಲ್‌ಬಾಗ್ ನಿರ್ವಹಣೆ ನೋಡಿಕೊಳ್ಳುವ ತೋಟಗಾರಿಕಾ ಇಲಾಖೆ ಉದ್ಯಾನದವೊಳಗೆ ಪ್ರೊಫೆಷನಲ್ ಕ್ಯಾಮರಾ ಮತ್ತು ಫೋಟೋ ಶೂಟ್ ನಿಷೇಧಿಸಿತ್ತು. ಆದರೆ ಆಗಮಿಸುವ ಜನರು ಡಿಜಿಟಲ್ ಕ್ಯಾಮರಾ ತೆಗೆದುಕೊಂಡು ಹೋಗುತ್ತಿದ್ದರು. ಈಗ ಆ ಕ್ಯಾಮರಾವನ್ನು ಸಹ ನಿಷೇಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
