ಹಂಪ:
ವಿಶ್ವ ಪರಂಪರೆಯ ತಾಣ ಹಂಪಿ ಸಮೀಪದ ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಜೂಯಲಾಜಿಕಲ್ ಪಾರ್ಕ್ ಹತ್ತಿರದ 15 ಎಕರೆ ಜಾಗದಲ್ಲಿ 28.20 ಕೋಟಿ ರೂ.ವೆಚ್ಚದಲ್ಲಿ ವಿಶ್ವದರ್ಜೆಯ ತ್ರಿಸ್ಟಾರ್ ಹೋಟಲ್ ಶೀಘ್ರದಲ್ಲಿಯೇ ತಲೆ ಎತ್ತಲಿದೆ.
ಹಂಪಿ ಹಾಗು ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕೆ ಸಕಲ ಸೌಕರ್ಯವುಳ್ಳ ತ್ರಿಸ್ಟಾರ್ ಹೋಟಲ್ ನಿರ್ಮಾಣಕ್ಕೆ ನಿನ್ನೆ (ಎ 20) ರಂದು ಒ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೂಮಿ ಪೂಜೆ ನೆರವೇರಿಸಿದ್ದಾರೆ.ಈ ಹೋಟಲ್‍ನಲ್ಲಿ 100 ಕೊಠಡಿಗಳಿರಲಿವೆ. ಪಾರ್ಕಿಂಗ್,ಜಿಮ್,ಓಪನ್ ರೆಸ್ಟೋರೆಂಟ್,ಸ್ಪಾ, ಈಜುಕೊಳ ಸೇರಿದಂತೆ ಇತರೆ ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್. ಹಂಪಿಗೆ ಭೇಟಿ ನೀಡುವ ಪ್ರವಾಸಿಗರು, ತುಂಗಾಭದ್ರಾ ಅಣೆಕಟ್ಟು, ಆನೆಗುಂದಿ, ಅಂಜನಾದ್ರಿ ಬೆಟ್ಟ, ಪಂಪಸರೋವರ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ತ್ರೀಸ್ಟಾರ್ ಹೋಟಲ್ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. 12ರಿಂದ 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
2022-23ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಬಿಡುಗಡೆ: ಮೇ.14ರಿಂದ ಶಾಲೆ ಪ್ರಾರಂಭ, ಅಕ್ಟೋಬರ್.3ರಿಂದ 16 ದಸರಾ ರಜೆ
ರಾಜ್ಯದಲ್ಲಿ 4 ಸ್ಥಳಗಳಲ್ಲಿ ಒಟ್ಟಾರೆ ರೂ. 83.97 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಅದರಂತೆ 20.71 ಕೋಟಿ ರೂ.ವೆಚ್ಚದಲ್ಲಿ ಬೇಲೂರುನಲ್ಲಿ 75 ಕೊಠಡಿಗಳ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್ ನಿರ್ಮಾಣ, 18.32 ಕೋಟಿ ರೂ.ವೆಚ್ಚದಲ್ಲಿ ಬಾದಾಮಿಯಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ, 16.74 ಕೋಟಿ ವೆಚ್ಚದಲ್ಲಿ. ವಿಜಯಪುರದಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮತ್ತು ಹಂಪಿಯಲ್ಲಿ ರೂ.28.20 ಕೋಟಿ ವೆಚ್ಚದಲ್ಲಿ 100 ಕೊಠಡಿಗಳ ಸುಸಜ್ಜಿತ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಕೆಜಿಎಫ್ 2’, ‘ಬಾಹುಬಲಿ 2’, ‘RRR’ ದಾಖಲೆ ಮುರಿಯಲು ‘ಪುಷ್ಪ 2’ ಮಾಸ್ಟರ್ ಪ್ಲ್ಯಾನ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
