ನವದೆಹಲಿ:
ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೂ ಶೇ.11.31ರಷ್ಟು ಮತದಾನವಾಗಿದೆ.
ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಲ್ಲಿ 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಇಂದು (ಶನಿವಾರ) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ.11.31ರಷ್ಟು ಮತದಾನವಾಗಿದೆ.
ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಶೇ.12.94ರಷ್ಟು ಮತದಾನವಾಗಿದ್ದಾರೆ, ಪಂಜಾಬ್ ನಲ್ಲಿ ಕಡಿಮೆ ಶೇ.9.64ರಷ್ಟು ಮತದಾನವಾಗಿದೆ.
ರಾಜ್ಯವಾರು ಮತದಾನದ ಮಾಹತಿ ಇಲ್ಲಿದೆ…
- ಬಿಹಾರ ಶೇ,10.58
- ಚಂಡೀಗಢ ಶೇ.11.64
- ಹಿಮಾಚಲ ಪ್ರದೇಶ ಶೇ.14.35
- ಜಾರ್ಖಂಡ್ ಶೇ.12.15
- ಒಡಿಶಾ ಶೇ.7.69
- ಪಂಜಾಬ್ ಶೇ.9.64
- ಉತ್ತರ ಪ್ರದೇಶ ಶೇ.12.94
- ಪಶ್ಚಿಮ ಬಂಗಾಳ ಶೇ.12.63
19-ಜಯನಗರ (SC) ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುವ 129-ಕುಲ್ತಾಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಗುಂಪೊಂದು ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಲೂಟಿ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ