ನವದೆಹಲಿ :
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ಇಂದು ಇಸ್ಲಾಮಾಬಾದಿನ ಹೈಕೋರ್ಟ್ ಹೊರಗೆ ಪಾಕಿಸ್ತಾನದಲ್ಲಿ ಅರೆಸೈನಿಕ ಫೆಡರಲ್ ಕಾನೂನು ಜಾರಿ ದಳ ರೇಂಜರ್ಸ್ ನಿಂದ ಅವರ ಬಂಧನವಾಗಿದೆ ಎಂದು ಪಾಕಿಸ್ತಾನ ಡಾನ್ ನ್ಯೂಸ್ ವರದಿ ಮಾಡಿದೆ.
ಇಮ್ರಾನ್ ಖಾನ್ ಅವರನ್ನು ತೋಷಖಾನಾ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಸ್ಲಾಮಾಬಾದ್ ಪೊಲೀಸರು ಪದಚ್ಯುತ ಪ್ರಧಾನಿಯ ಬಂಧನ ವಾರಂಟ್ ನೊಂದಿಗೆ ಕಳೆದ ತಿಂಗಳು ಲಾಹೋರ್ ಗೆ ಬಂದು ತಲಾಶ್ ಮಾಡಿದ್ದರು.
