ತುರುವೇಕೆರೆ :
ಪಟ್ಟಣದ ತಾಲ್ಲೂಕು ಕಛೇರಿಗೆ ಹೊಂದಿಕೊಂಡಂತಿರುವ ಸಾರ್ವಜನಿಕ ಶೌಚಾಲಯವನ್ನು ತೆರೆಯಲಾಗಿದೆ.
ತಾಲ್ಲೂಕು ಕಛೇರಿಗೆ ಹೊಂದಿಕೊಂಡಂತಿರುವ ಸಾರ್ವಜನಿಕ ಶೌಚಾಲಯವನ್ನು ಕೆಲ ದಿನಗಳಿಂದ ಬಂದ್ ಮಾಡಿದ್ದರಿಂದ ಕಚೇರಿಗೆ ಬಂದು ಹೋಗುವವರಿಗೆ ತೊಂದರೆ ಆಗಿತ್ತು. ಶೌಚಾಲಯ ಮುಚ್ಚಿರುವುದರಿಂದ ಜನರು ತಾಲ್ಲೂಕು ಕಛೇರಿ ಕಟ್ಟಡ ಹಾಗೂ ಅಕ್ಕಪಕ್ಕದ ಗೋಡೆಗಳು ಹಾಗೂ ಗುರುಭವನ ಮೈದಾನದ ಕಾಂಪೌಂಡ್‍ಗಳನ್ನೇ ಮೂತ್ರ ವಿಸರ್ಜನೆಗೆ ಬಳಸುತ್ತಿದ್ದರು ಈ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.
ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶೌಚಾಲಯ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
