ಕೀಳುಮಟ್ಟದ ಪದ ಬಳಕೆ ಸರಿಯಲ್ಲ; ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ದೂರು

ನಾಯಕನಹಟ್ಟಿ:

    ಶಾಸಕ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಕೀಳುಮಟ್ಟದ ಪದಬಳಕೆ ಹಾಗೂ ಕೋಮು ಪ್ರಚೋಧನೆ ಮಾಡಿರುವ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಪಿ.ನಾಗೇಶ್‍ರೆಡ್ಡಿ ಮಾತನಾಡಿ, ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣರವರು ತಮ್ಮ 35 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತ ಆಡಳಿತ ನಡೆಸುತ್ತಾ ಬಂದಿದ್ದಾರೆ. ಅವರ ವಿರುದ್ಧ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಅಸಂವಿಧಾನಕ, ಪ್ರಚೋಧನಾಕಾರಿ ಪದಬಳಕೆಯಿಂದ ಕೋಮು ಗಲಭೆ ಉಂಟಾಗಲು ಕಾರಣರಾಗುವುದು ಸರಿಯಲ್ಲ.    ಇವರ ಕೀಳು ಮಟ್ಟದ ಪದ ಬಳಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸುವ ಜನಸಾಮಾನ್ಯರಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜಬಿತ್ತುವ ಕೆಲಸ ಮಾಡಿದಂತಾಗಿ ಕೋಮುಸೌಹಾರ್ಧತೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡಿದರೆ ಪ್ರತಿಭಟನೆ ನಡೆಸಲಾಗುವುದು. ಹಾಗೆಯೇ ಶಾಸಕರ ವಿರುದ್ಧ ಅಸಂವಿಧಾನ ಪದ ಬಳಕೆ ಮಾಡಿರುವ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ಕಾನೂನುಕ್ರಮಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.   ಮುಖಂಡ ಸೂರನಾಯಕ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರು ಮ್ಯಾಸನಾಯಕ ಮತ್ತು ಊರನಾಯಕ ಎಂಬ ಪದ ಬಳಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಪರಿಶಿಷ್ಟ ಪಂಗಡದಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕರ ಸಹೋದರ ಊರ ನಾಯಕರೊಂದಿಗೆ ಸಂಬಂಧ ಬೆಳೆಸಿದ್ದಾರೆ. ಈಗಿರುವಾಗ ವಿನಾಃ ಕಾರಣ ಪರಿಶಿಷ್ಟ ಪಂಗಡದ ಜನರದಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ.

   ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ. ಜತೆಗೆ ನೂರಾರು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಭ್ರಷ್ಟಾಚಾರ ರಹಿತ ರಾಜಕಾರಣಿ, ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ.ಇಂತಹ ಕಳಂಕರಹಿತ ನಾಯಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

    ಕೇವಲ ಮತಕ್ಕಾಗಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದು ಮಾಜಿ ಎಸ್.ತಿಪೇಸ್ವಾಮಿ ಕೆಲಸವಾಗಿದೆ. ಜಾತಿ ರಾಜಕಾರಣ ಪದ ಬಳಕೆಯಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತದೆ. ರಾಜಕೀಯ ವಿಚಾರದಲ್ಲಿ ಆಪಾಧನೆ ಮಾಡಲಿ ಅದನ್ನು ಹೊರತುಪಡಿಸಿ ಜಾತಿ ವಿಚಾರದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಪ್ರಚೋಧನಾಕಾರಿ ಹೇಳಿಕೆ ನೀಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

   ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್ ಮಾತನಾಡಿ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರು ಕೀಳು ಮತ್ತು ಕೋಮು ಪ್ರಚೋಧನಾಕಾರಿ ಪದಬಳಕೆಯಿಂದ ಸಮಾಜದಲ್ಲಿ ಗಲಭೆಗೆ ಕಾರಣವಾಗುವುದು. ಇಲ್ಲಿಯವರೆಗೂ ಕ್ಷೇತ್ರದಲ್ಲಿ ಯಾವುದೇ ಕೋಮುಗಳ ಮಧ್ಯೆ ಗಲಭೆ ನಡೆದಿಲ್ಲ. ಶಾಂತಿ ಸುವ್ಯವಸ್ಥೆಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ವಿರುದ್ಧ ವೈಯಕ್ತಿಕ, ಅಸಂವಿಧಾನ ಬಳಕೆ ಮಾಡಿರುವುದು ಸರಿಯಲ್ಲ ಎಂದರು.

   ಮುಖಂಡ ಬಂಡೆಕಪಿಲೆ ಓಬಣ್ಣ ಮಾತನಾಡಿ, ಪರಿಶಿಷ್ಟ ಪಂಗಡದವರೆಲ್ಲ ಒಂದೇ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಊರ ನಾಯಕ-ಮ್ಯಾಸನಾಯಕ ಎಂಬುದನ್ನು ಬಿಂಬಿಸುವುದು ಸಮಂಜಸವಲ್ಲ. ರಾಜಕೀಯ ವಿಚಾರ ಮಾತನಾಡಲಿ ನಮ್ಮಗಳ ಅಭ್ಯಂತರವಿಲ್ಲ. ಆದರೆ, ಜಾತಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯಿಂದ ಎತ್ತಿಕಟ್ಟುವ ಕೆಲಸ ಮಾಡಿ ಪರಿಶಿಷ್ಟ ಪಂಗಡದವರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.

   ಮೊಳಕಾಲ್ಮುರು ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಶಾಲೆ, ವಿದ್ಯುತ್, ಸುಸಜ್ಜಿತ ರಸ್ತೆ, ರೇಖಲಗೆರೆ ಫೀಡರ್ ಚಾನಲ್ ದುರಸ್ತಿ ತುಂಗಾಭದ್ರ ಹಿನ್ನೀರು ಯೋಜನೆ, ವಸತಿ ಶಾಲೆಗಳ ನಿರ್ಮಾಣ ಮಾಡಿದ್ದಾರೆ. ಇಂತಹ ಸಮಾಜಮುಖಿ ಕೆಲಸವನ್ನು ಮಾಡುವ ಶಾಸಕರಿಗೆ ಪ್ರೋತ್ಸಾಹ ನೀಡಬೇಕು. ಅದು ಬಿಟ್ಟು ಜನಾಂಗದ ವಿಚಾರದಲ್ಲಿ ವಿಭಜನೆ ಮಾಡುವುದನ್ನು ನಿಲ್ಲಿಸಬೇಕೆಂದರು.ವಕೀಲ ಎಸ್.ಉಮಾಪತಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರು ಸಾಮಾಜಿಕ ಜಾಲತಾಣದಲ್ಲಿ ಅಸಂವಿಧಾನ ಪದಬಳಕೆಯಿಂದ ಕ್ಷೇತ್ರದ ಜಾತಿ, ಜನಾಂಗದವರಲ್ಲಿ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದೇ ಮಾತನಾಡಿರುವುದು ಅವರ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿಯುತ್ತದೆ.

   ಪರಿಶಿಷ್ಟ ಪಂಗಡದ ನಾಯಕನಾಗಿ ತನ್ನ ಸಮುದಾಯದವರನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಎತ್ತಿಕೊಟ್ಟುವ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕ್ಷೇತ್ರದ ಜನತೆಗೆ ಯಾರ ಅವಧಿಯಲ್ಲಿ ಯಾವ ಯಾವ ಕೆಲಸಗಳು ಕಾರ್ಯಗತವಾಗಿವೆ ಎಂಬುದರ ಬಗ್ಗೆ ಅರಿವಿದೆ. ಸಮಾಜದಲ್ಲಿ ಇವರು ನೀಡುವ ಅಸಂಬದ್ಧ ಹೇಳಿಕೆಗಳಿಂದ ದೊಂಬಿ, ಗಲಭೆ, ಶಾಂತಿಭಂಗಕ್ಕೆ ಕಾರಣವಾಗುವುದು. ಆದ್ದರಿಂದ ಇಂತಹ ಹೇಳೀಕೆ ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ತಿಪ್ಪೇಸ್ವಾಮಿ, ಪ್ರಭುಸ್ವಾಮಿ, ರಮೇಶ್‍ಬಾಬು, ಬೋರನಾಯಕ, ಪ್ರಕಾಶ್, ವಾಸೀಂ ಅಹಮದ್, ಬಸಣ್ಣ, ಶ್ರೀಕಾಂತ್, ಮಂಜುನಾಥ್, ಓಬಯ್ಯ, ರುದ್ರಮುನಿ, ಕಾಟಯ್ಯ, ಮುದಿಯಪ್ಪ ಮತ್ತಿತರರಿದ್ದರು

Recent Articles

spot_img

Related Stories

Share via
Copy link