ಪ್ರಾಮಾಣಿಕ ಪ್ರಯತ್ನದಿಂದ ಅತ್ಯುತ್ತಮ ಫಲಿತಾಂಶ

ತುಮಕೂರು:

ಅನಕ್ಷರಸ್ಥ, ಕಡಿಮೆ ಓದಿದ ಹೆತ್ತವರನ್ನು ಅವಮಾನಿಸದಿರಿ 

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಪ್ರಯತ್ನಪಟ್ಟು ಪ್ರಾಮಾಣಿಕವಾಗಿ ಓದಿದರೇ ಅತ್ಯುತ್ತಮ ಫಲಿತಾಂಶ ಬಂದೇ ಬರುತ್ತದೆ. ನಿಮ್ಮ ತಂದೆ-ತಾಯಿಗಳು ಕಡಿಮೆ ಓದಿದ್ದರೆ ಅಥವಾ ಅನಕ್ಷರಸ್ಥರಾದ್ದರೆ ಅವರನ್ನು ಅವಮಾನಿಸದಿರಿ ಎಂದು ನಗರದ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ “ವಿದ್ಯಾಪ್ರಗತಿ’’ ಉಚಿತ ಶೈಕ್ಷಣಿಕ ಮೇಳನÀದ ಕೊನೆ ದಿನದ ಎರಡನೇ ಗೋಷ್ಟಿ “ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪವಿತ್ರತೆಯ ಮಾರ್ಗದರ್ಶನ” ಕುರಿತು ಅವರು ಮಾತನಾಡಿದರು.

ಶೇ 90 ರಷ್ಟು ಫಲಿತಾಂಶ ಬಂದೇ ಬರುತ್ತದೆ :

ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಪರೀಕ್ಷೆಗಳು ಆರಂಭಕ್ಕೂ ಮೊದಲು ಅಂದರೇ ಡಿಸೆಂಬರ್ 31 ರ ಒಳಗೆ ನೋಟ್ಸ್ ತಯಾರಿಸಿ ಇಟ್ಟುಕೊಂಡಿರಬೇಕು. ಜನವರಿ 1 ರ ನಂತರ ಹಿಂದಿನ 3-4 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು 3 ಗಂಟೆ ಸಮಯದೊಳಗೆ ಬಿಡಿಸಿ ಅದನ್ನು ತರಗತಿಯ ಶಿಕ್ಷಕರಿಂದ ತಿದ್ದಿಸಿಕೊಳ್ಳಬೇಕು.

ಈ ರೀತಿ ಉತ್ತಮ ಓದು, ಪ್ರಾಮಾಣಿಕ ಪ್ರಯತ್ನದಿಂದ ನಿಮ್ಮ ಪರೀಕ್ಷಾ ಫಲಿತಾಂಶ ಶೇ. 90 ರಷ್ಟು ಬಂದೇ ಬರುತ್ತದೆ. ಉತ್ತಮ ಪ್ರಯತ್ನ, ಶ್ರಮಕ್ಕೆ ಈ ರೀತಿಯ ಫಲಿತಾಂಶ ಬರಲೇಬೇಕು ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ತೊಲಗಿಸಿ ಭರವಸೆ ಮೂಡಿಸಿದರು.

ಇಲಾಖೆಗಳು ತರಬೇತಿ ಪಡೆದಿವೆ :

ಈ ನಾಡಿನಲ್ಲಿ ಮನೆ ಮಾತದ ಸಾಲು ಮರದ ತಿಮ್ಮಕ್ಕ, ಜಿಲ್ಲೆಯವರೆ ಆದ ಸೂಲಗಿತ್ತಿ ನರಸಮ್ಮ ಮೊದಲಾದವರು ಶಾಲೆಗೆ ಹೋಗಿ ಕಲಿತವರಲ್ಲ. ಆದರೇ ಸಮಾಜಕ್ಕೆ ತಮ್ಮಿಂದಾದ ಉತ್ಕøಷ್ಟ ಸೇವೆ ಸಲ್ಲಿಸಿ ಅವರೇ ಶಾಲೆ-ಕಾಲೇಜುಗಳಲ್ಲಿ ಪಾಠವಾಗಿದ್ದಾರೆ.

ಅರಣ್ಯ ಇಲಾಖೆ ಸಾಲು ಮರದ ತಿಮ್ಮಕ್ಕನಿಂದ ಮರ-ಗಿಡ ಬೆಳೆಸುವ ಕುರಿತು ಹಾಗೂ ಆರೋಗ್ಯ ಇಲಾಖೆಯು ಹೆರಿಗೆ ಸುರಕ್ಷತೆಯ ಬಗ್ಗೆ ಸೂಲಗಿತ್ತಿ ನರಸಮ್ಮನವರಿಂದ ತಮ್ಮ ತಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸಿದೆ. ಆದ್ದರಿಂದ ಮಕ್ಕಳೆ ಅನಕ್ಷರಸ್ಥರು, ಕಡಿಮೆ ಕಲಿತವರ ಬಗ್ಗೆ ಅನಾದರ ಸಲ್ಲದು ಅವರಲ್ಲೂ ಲೋಕದ ಒಳಿತಿಗೆ ಬೇಕಾದ ವಿದ್ಯೆ ಇರುತ್ತದೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ 1 ಸಂಸ್ಥೆಯಾಗಿ ಬೆಳೆಯುವ ಪರಿ :

ಒಬ್ಬ ವ್ಯಕ್ತಿ ಹೇಗೆ ಒಂದು ಸಂಸ್ಥೆಯಾಗಿ ರೂಪುಗೊಂಡು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ನಮ್ಮೊಂದಿಗೆ ಈ ವೇದಿಕೆ ಮೇಲಿರುವ ರಾಮಕೃಷ್ಣಾಶ್ರಮದ ಪೂಜ್ಯರಾದ ಶ್ರೀ ವೀರೇಶಾನಂದ ಸರಸ್ವತಿಗಳು, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಹಾಗೂ ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ ಅವರುಗಳೇ ಉತ್ತಮ ಮಾದರಿ.

ಯಾವುದೇ ವ್ಯಕ್ತಿಯಲ್ಲಿ ಆತನ ನಕಾರಾತ್ಮಕ ಅಂಶವನ್ನೆ ಹೆಚ್ಚಾಗಿ ಗುರುತಿಸದೆ ಸಕಾರಾತ್ಮಕವಾಗಿ ಬೆಳೆದ ಪರಿಯನ್ನು ಗುರುತಿಸಿ ಗೌರವಿಸಬೇಕು. ಕಲ್ಪತರುನಾಡು ತುಮಕೂರಿನಲ್ಲಿ 2 ದಿನಗಳಿಂದ ನಡೆಯುತ್ತಿರುವ ಈ ಶಿಕ್ಷಣ ಮೇಳವು ಜಿಲ್ಲೆಯ ಶೈಕ್ಷಣಿಕನಾಡು ಎಂಬ ಬ್ರ್ಯಾಂಡಿಗೆ ಹೆಚ್ಚು ಅನ್ವರ್ಥವಾಗುವಂತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಭವಿಷ್ಯ, ಬದುಕಿನ ಕುರಿತು ಅರಿವು ಮೂಡಿಸುವಲ್ಲಿ ಈ ವಿದ್ಯಾಪ್ರಗತಿ ಮೇಳವು ಯಶಸ್ವಿಯಾಗಿದೆ.

-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ

ವಿದ್ಯಾರ್ಥಿಗಳು ಕಾಲೇಜು ಕಲಿಯುವ ಹಂತದಲ್ಲಿ ಕೋರ್ಸ್ ಆಯ್ಕೆ ಮಾಡಿಕೊಳ್ಳವಾಗ ನಿಮ್ಮ ತಂದೆ-ತಾಯಿ ಇಚ್ಛಿಸುವ ಅಥವಾ ಅವರ ಮಾತಿಗೆ ಕಟ್ಟುಬಿದ್ದು ಇಷ್ಟವಿಲ್ಲದ ಕೋರ್ಸ್ ಆಯ್ಕೆ ಮಾಡದಿರಿ. ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದರಷ್ಟೆ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರುತ್ತದೆ. ವಿದ್ಯಾರ್ಥಿಗಳು ಇದನ್ನು ಮರೆಯದಿರಿ.

-ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು, ಅಧ್ಯಕ್ಷರು, ಶ್ರೀ ರಾಮಕೃಷ್ಣಾಶ್ರಮ, ತುಮಕೂರು

ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮ ಮಠದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳನ್ನು ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಮತ್ತು ಪ್ರಗತಿ ಟಿವಿ ಸಿಇಓ ಟಿ.ಎನ್.ಶಿಲ್ಪಶ್ರೀ ಅವರುಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ್‍ವಾನಳ್ಳಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap