PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೋ ವೈರಲ್

ಕಲಬುರಗಿ :

ಪಿಎಸ್ ಐ ಹುದ್ದೆಗಳ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋವೊಂದು ಪತ್ತೆಯಾಗಿದೆ.ಸದ್ಯ ನೊಂದ ಪಿಎಸ್ ಐ ಅಭ್ಯರ್ಥಿಗಳ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಆಡಿಯೋ ಭಾರಿ ವೈರಲ್ ಆಗುತ್ತಿದೆ. ಆದರೆ ಆಡಿಯೋದಲ್ಲಿ ಯಾರು ಯಾರ ಜೊತೆ ಸಂಭಾಷಣೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ರಾಜ್ಯದ ಜತೆಗೆ ಬಿಗ್‌ ಶಾಕ್‌ : ಬೆಂಗಳೂರಲ್ಲಿ BA.10, BA.2,12 ಕೊರೊನಾ ಹೊಸ ರೂಪಾಂತರಿ ವೈರಸ್‌ ಪತ್ತೆ

ತಮ್ಮ ವ್ಯಕ್ತಿಯೊಬ್ಬರು ಪಿಎಸ್ ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು ಸಿದ್ದರಿದಾರೆಂದು ಹೇಳಿರುವ ವ್ಯಕ್ತಿ ಒಳ್ಳೆ ಶ್ರೀಮಂತರು ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಬ್ಬ ವ್ಯಕ್ತಿಯಿಂದ ಏನೂ ಆಗೋಲ್ಲ ಇದರಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ. ಜಾಸ್ತಿ ಅವರೇ ಶಾಮೀಲಾಗಿದಾರೆ ಎಂಬಿತ್ಯಾದಿ ಮಾತನಾಡಿದ್ದಾರೆ. ಆ ಇಬ್ಬರ ವ್ಯಕ್ತಿಗಳ ಮೊಬೈಲ್ ಸಂಭಾಷಣೆಯ ವಿವರಣೆ ಇಲ್ಲಿದೆ ನೋಡಿ

BMW ಕಾರು ಢಿಕ್ಕಿ; ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನಕ್ಕೆ ನಿರ್ಧಾರ

ವ್ಯಕ್ತಿ-1 ನಮಸ್ಕಾರೀ ಸರ್

ವ್ಯಕ್ತಿ-2 ನಮಸ್ಕಾರ್ ಪಿಎಸ್ ಐ ಸಾಬ್ರಿಗೆ

ವ್ಯಕ್ತಿ-1 ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದಾರಂತೆ?

ವ್ಯಕ್ತಿ-2 ವರ್ಷಾ ಇದ್ದುದ್ದೇ.. ಅದೆನ್ ಆಗೋಲ್ಲ.

ವ್ಯಕ್ತಿ-1 2004 ರ ಕೆಎಎಸ್ ನಲ್ಲಿ ಆದಂತೆ ಮತ್ತೆನಾದರೂ.

ವ್ಯಕ್ತಿ-2 ಏನು ಆಗೋಲ್ಲ.. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ. ದೊಡ್ಡವರೇ ಶಾಮೀಲಾಗಿದಾರೆ. ಗೌಡ್ರೆ ನಮ್ಮವರು ಒಬ್ರಿದಾರೆ.. ದುಡ್ಡು ಸಾಕಷ್ಟಿದೆ..

ವ್ಯಕ್ತಿ-1 ಈ ಸರ್ತಿ ಆಗೋಲ್ಲ, 402 ಗೆ ಹಾಕಿ. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್ ನಿಂದ ಮಾಡಲಿ ಸೆಂಟರ್ ಹಾಕಿಸಿಕೊಂಡು ಬರಬೇಕು.

ವ್ಯಕ್ತಿ-2 ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್ ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್ ನಿಂದ ಆಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ.

ವ್ಯಕ್ತಿ-1 ಆಯ್ತು..

545 ಪಿಎಸ್ ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ.

ತುಮಕೂರು ಜಿಲ್ಲೆಯಲ್ಲಿ ಇಬ್ಬರು ದಲಿತ ಯುವಕರನ್ನು ಥಳಿಸಿ, ಕೊಂದ ದುಷ್ಕರ್ಮಿಗಳು

402 ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಹಿಗೇ ಹಲವು ಸಂಭಾಷಣೆಗಳನ್ನ ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link