BMW ಕಾರು ಢಿಕ್ಕಿ; ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನಕ್ಕೆ ನಿರ್ಧಾರ

ಮಂಗಳೂರು:

 ನಗರದ ಬಲ್ಲಾಳ್ ಭಾಗ್ ನಲ್ಲಿ ಡಿವೈಡರ್ ಹಾರಿ ಬಿಎಂಡಬ್ಲ್ಯು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.ಏ. 9 ರಂದು ನಗರದ ಬಲ್ಲಾಳ್ ಭಾಗ್ ನಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಡಿವೈಡರ್ ಹಾರಿ ಎರಡು ವಾಹನಗಳಿಗೆ ಢಿಕ್ಕಿ ಆಗಿತ್ತು.

ರಾಜ್ಯದ ಜತೆಗೆ ಬಿಗ್‌ ಶಾಕ್‌ : ಬೆಂಗಳೂರಲ್ಲಿ BA.10, BA.2,12 ಕೊರೊನಾ ಹೊಸ ರೂಪಾಂತರಿ ವೈರಸ್‌ ಪತ್ತೆ

ಈ ಪೈಕಿ ಪ್ರೀತಿ ಮನೋಜ್ ಎನ್ನುವವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಅವರು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ. ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದು, ಆ ಬಳಿಕ ಕುಟುಂಬದ ಸದಸ್ಯರು ಪ್ರೀತಿ ಮನೋಜ್ ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link