ಸಾಮಾಜಿಕ ಜಾಲತಾಣ ಫೇಸ್ಬುಕ್ ತನ್ನ ಕೋಟ್ಯಾಂತರ ಬಳಕೆದಾರರಿಗಾಗಿ ಹೊಸ ಫೀಚರ್ ಶುರು ಮಾಡಿದೆ. ಕೆಲ ತಿಂಗಳ ಹಿಂದೆಯೇ ಫೇಸ್ಬುಕ್ ಹೊಸ ಫೀಚರ್ ಬಗ್ಗೆ ಮಾಹಿತಿ ನೀಡಿತ್ತು. ಈಗ ಫೀಚರ್ ಬಿಡುಗಡೆ ಮಾಡಿದೆ. ಫೇಸ್ಬುಕ್ ಇದಕ್ಕೆ ‘Your Time on Facebook’ ಎಂದು ನಾಮಕರಣ ಮಾಡಿದೆ.
ಇನ್ಸ್ಟ್ರಾಗ್ರಾಮ್, ಟ್ವೀಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನೀವು ಎಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ತಿಳಿಯಲು ಮೊದಲು ಫೇಸ್ಬುಕ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ. ನಂತ್ರ ಸೆಟ್ಟಿಂಗ್ ಮತ್ತು ಪ್ರೈವಸಿಯಲ್ಲಿ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ‘Your Time on Facebook’ ಆಯ್ಕೆ ಸಿಗಲಿದೆ. ಅದನ್ನು ಕ್ಲಿಕ್ ಮಾಡಿದ್ರೆ ನೀವು ಎಷ್ಟು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆದಿದ್ದೀರಿ ಎಂಬ ಮಾಹಿತಿ ಸಿಗಲಿದೆ.
ಹೊಸ ಫೀಚರ್ ಪ್ರಕಾರ, ನೀವು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಮಯ ಕಳೆದಿದ್ದೀರಿ ಎಂಬುದು ಗೊತ್ತಾಗಲಿದೆ. ಮಾಹಿತಿ ಪ್ರಕಾರ ಎಲ್ಲ ಬಳಕೆದಾರರಿಗೂ ಈ ಫೀಚರ್ ಲಭ್ಯವಿಲ್ಲ. ಐಒಎಸ್ ಗ್ರಾಹಕರು ಮಾತ್ರ ಸದ್ಯ ‘Your Time on Facebook’ ಲಾಭ ಪಡೆಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
