ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ

ಬೆಳಗಾವಿ:

     ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಗುಲಾಬರಾವ್ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಗುಲಾಬರಾವ್ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಭೂಷಣ್ ಗುಲಾಬರಾವ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಯಾರೂ ಕೂಡ ಈ ನಕಲಿ ಖಾತೆಯಿಂದ ಬರುವ ಸಂದೇಶ ಸ್ವೀಕರಿಸದಂತೆ ಹಾಗೂ ಬೆಳಗಾವಿ ಸಿಟಿ ಪೊಲೀಸ್ ಕಮಿಷನರ್ ಖಾತೆ ಹೊರತಾಗಿ ನಾನು ಯಾವುದೇ ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ ಎಂದು ಬೆಳಗಾವಿ ಕಮಿಷನರ್ ಭೂಷಣ್ ಗುಲಾಬರಾವ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link