ಖ್ಯಾತ ನಿರ್ದೇಶಕ ಸತೀಶ್‌ ಕೌಶಿಕ್‌ ಇನಿಲ್ಲ…!

ಮುಂಬೈ:

      ನಟ, ನಿರ್ದೇಶಕ, ನಿರ್ಮಾಪಕ, ಹಾಸ್ಯ ನಟ‌ ಹಾಗೂ ಚಿತ್ರಕಥೆ ಬರಹಗಾರನಾಗಿ ಖ್ಯಾತರಾದ ಸತೀಶ್ ಕೌಶಿಕ್  ಮಾರ್ಚ್ 8 ರಾತ್ರಿ ನಿಧನರಾಗಿದ್ದಾರೆ .

    ಹರಿಯಾಣದಲ್ಲಿ 1965ರ ಏಪ್ರಿಲ್ 13ರಂದು ಜನಿಸಿದ್ದ ಸತೀಶ್ ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. 1972ರಲ್ಲಿ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಡಿಗ್ರಿ‌ ಮುಗಿಸಿದ ಸತೀಶ್ ಕೌಶಿಕ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೇ ವಿದ್ಯಾರ್ಥಿ.

    ಹೀಗೆ ಕಲೆ ಕಡೆ ಒಲವನ್ನು ಹೊಂದಿ ಫಿಲ್ಮ್ ಇನ್ಸ್ಟಿಟ್ಯೂಟ್ ತರಬೇತಿ ಪಡೆದಿದ್ದ ಸತೀಶ್ ಕೌಶಿಕ್ 1983ರಲ್ಲಿ ಜಾನೆ ಭಿ ದಾರೆ ಹೋ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆ ಆರಂಭಿಸಿದ್ದರು, 1986ರಲ್ಲಿ ಕಥಾ ಸಾಗರ್ ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. 1994ರಲ್ಲಿ ಫಿಲಿಪ್ಸ್ ಟಾಪ್ 10ರಲ್ಲಿ ನೋನಿ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದ ಸತೀಶ್ ಕೌಶಿಕ್ ಎರಡನೇ ಬಾರಿಗೆ ಕಿರುತೆರೆಯಲ್ಲಿ ನಟಿಸಿದ್ದರು.

     ನಟನೆಯಲ್ಲಿ ತೊಡಿಗಿಸಿಕೊಂಡಿದ್ದ ಸತೀಶ್ ಕೌಶಿಕ್ 1993ರಲ್ಲಿ ತೆರೆಕಂಡ ರೂಪ್ ಕಿ ರಾಣಿ ಚೋರನ್ ಕಿ ರಾಜಾ ಎಂಬ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಬಳಿಕ

   1987ರ ಸೂಪರ್ ಹೀರೊ ಫಿಲ್ಮ್‌ನಲ್ಲಿ ಕ್ಯಾಲೆಂಡರ್ ಎಂಬ ಪಾತ್ರ, ದಿವಾನ ಮಸ್ತಾನದ ಪಪ್ಪು ಪೇಜರ್, ಬ್ರಿಟಿಷ್ ಫಿಲ್ಮ್ ಬ್ರಿಕ್ ಲೇನ್‌ನಲ್ಲಿ ಚನು ಅಹ್ಮದ್ ಪಾತ್ರಗಳು ಸತೀಶ್ ಕೌಶಿಕ್ ನಿರ್ವಹಿಸಿದ ಪ್ರಮುಖ ಹಾಗೂ ಖ್ಯಾತ ಪಾತ್ರಗಳಾಗಿವೆ. ಇವರು 1990ರಲ್ಲಿ ರಾಮ್ ಲಖನ್ ಚಿತ್ರಕ್ಕಾಗಿ ಹಾಗೂ 1997ರಲ್ಲಿ ಸಾಜನ್ ಚಾಲೆ ಸಸುರಲ್ ಚಿತ್ರಗಳಿಗಾಗಿ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link