ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಅಖಾಡಕ್ಕಿಳಿದ ರೈತರು

ಗದಗ

      ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣುಗಳ ಹಾವಳಿಯ ವರದಿಗಳಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಮತ್ತೊಂದೆಡೆ ಬಿಸಿಲಿನ ಬೇಗೆ ಜೋರಾಗಿದೆ. ಜನ ತಂಪು ಪಾನೀಯಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಹಣ್ಣು ಖರೀದಿ ಎಂದರೆ ಜನ ಭಯಪಡುವಂತಾಗಿದೆ. ಇದರಿಂದಾಗಿ ರೈತರೇ ನೇರವಾಗಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ಗದಗ ನಗರದಲ್ಲಿ ರೈತರು ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳ ರೀದಿಗೆ ಜನ ಮುಗಿಬಿದ್ದಿದ್ದಾರೆ. ಇದರಿಂದಾಗಿ ದಲ್ಲಾಳಿಗಳು ಮಾತ್ರ ಈ ಬಾರಿ ಅಕ್ಷರಶಃ ಕಂಗಾಲಾಗಿದ್ದಾರೆ.

     ದಲ್ಲಾಳಿಗಳಿಗೆ ನೀಡುವ ದರಕ್ಕಿಂತ ರೈತರು ಈಗ ಮೂರು ಪಟ್ಟು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರ ಈ ನಿರ್ಧಾರದಿಂದ ಗ್ರಾಹಕರಿಗೂ ಬಂಪರ್ ಲಾಭವಾಗುತ್ತಿದೆ. ಯಾಕೆಂದರೆ ದಲ್ಲಾಳಿಗಳು ಕೆಜಿಗೆ 25-30 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಈಗ ರೈತರು ಕೆಜಿಗೆ 13-15 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.ವರ್ಷವಿಡೀ ಕಷ್ಟಪಟ್ಟರೂ ಮಾರಾಟದ ವೇಳೆ ಸದಾ ದಲ್ಲಾಳಿಗಳ ಹೊಡೆತಕ್ಕೆ ಸಿಲುಕಿ ನಲುಗುವ ರೈತರ ಹೊಸ ಪ್ಲಾನ್​ನಿಂದಾಗಿ ಗ್ರಾಹಕರೂ ಖುಷಿಯಾಗಿದ್ದಾರೆ. ದಲ್ಲಾಳಿಗಳ ಆಟಕ್ಕೆ ಹೊಡೆತ ಬಿದ್ದಿದೆ.

Recent Articles

spot_img

Related Stories

Share via
Copy link