ಪ್ರಜಾಧ್ವನಿ ಯಾತ್ರೆಯಲ್ಲಿ ಗಲಾಟೆ : ಸಿದ್ದರಾಮಯ್ಯ ಸಿಡಿ ಮಿಡಿ..!

 ಕಿತ್ತೂರು: 

      ರಾಜ್ಯದ ಎಲ್ಲಾ ಪಕ್ಷಗಳು ರಥಯಾತ್ರೆ ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಈ ರಥಯಾತ್ರೆಗಳಲ್ಲಿ ಸದ್ಯ ಹೊರಬರುತ್ತಿರುವ ವಿಷಯಗಳು ಅಷ್ಟೆ ಸ್ವಾರಸ್ಯಕರವಾಗಿರುತ್ತಿವೆ ನಿನ್ನೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ರಥಯಾತ್ರೆಗೂ  ಮುನ್ನವೇ ವಿಘ್ನ ಎದುರಾಗಿದೆ ಮತ್ತು ಜೆಡಿಎಸ್‌ ನಲ್ಲಿ ಟಿಕೆಟ್‌ ಗೊಂದಲ ಇದೇ ಹಲವು ಪಕ್ಷಗಳಲ್ಲಿ ಹಲವು ರೀತಿಯ ಗೊಂದಲಗಳು ಆದರೆ ಸದ್ಯಕ್ಕೆ ಶಾಂತಿ ಮತ್ತು ತನ್ನ ಪಾಡಿಗೆ ತಾನು ಯಾರ ಭಯವಿಲ್ಲ ನಡೆಯುತ್ತಿರುವ ಒಂದೇ ಒಂದು ಯಾತ್ರೆ ಅಂದರೆ ಅದು ಕಾಂಗ್ರೆಸ್‌ ನ ಪ್ರಜಾಧ್ವನಿ ಯಾತ್ರೆ.

      ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಕಾರ್ಯಕರ್ತರ ಗಲಾಟೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಭಾಷಣ ಕೇಳಲು ಇಷ್ಟ ಇಲ್ಲ ಅಂದ್ರೆ ದಯವಿಟ್ಟು ಇಲ್ಲಿಂದ ಹೋಗಿ. ಎಲ್ಲದಕ್ಕೂ ಒಂದು ಮಿತಿ ಇರಬೇಕು ನಾನು ಭಾಷಣ ಮಾಡಲ್ಲ ಎಂದು ಹೊರಟೇ ಬಿಟ್ಟರು. ನಂತರ ಸ್ಥಳೀಯ ನಾಯಕರು ಮನವೊಲಿಸಿದ ಬಳಿಕ ಸಿದ್ದರಾಮಯ್ಯ ಭಾಷಣ ಮುಂದುವರಿಸಿದರು.

    ಏ ಯಾವನಯ್ಯ ಅವನು ಯಾರವನು ಗಲಾಟೆ ಮಾಡೋನು ಕಳಿಸ್ರಿ ಆಚೆಗೆ ಗಲಾಟೆ ಮಾಡಿದ್ರೆ ಟಿಕೆಟ್ ಕೊಡಲ್ಲ ನಾನು. ಕುಡಿಸಿಕೊಂಡು ಕರಕೊಂಡ ಬಂದು ಕುಣಿಸೋದಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಕಿತ್ತೂರಿನ  ಹೊಸ ಕಾದರವಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಡವರಿಗೆ ಐದು ಲಕ್ಷ ಮನೆ ಕಟ್ಟಿಸಿದ್ದೆ. ಇವರ (ಬಿಜೆಪಿ) ಮನೆ ಹಾಳಾಗ ಐದು ವರ್ಷದಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ” ಎಂದು  ಟೀಕಿಸಿದರು. ವಸತಿ ಸಚಿವ ವಿ. ಸೋಮಣ್ಣ ಅವರನ್ನು ವಿಧಾನಸಭೆಯಲ್ಲಿ ಈ ಬಗ್ಗೆ ಆದೇಶವಿದ್ದರೆ ಕೊಡಿ ಎಂದು ಕೇಳಿದೆ. ನಾಲ್ಕು ವರ್ಷದಲ್ಲಿ ಒಂದೂ ಆದೇಶ ತೋರಿಸಲಿಲ್ಲ’ ಎಂದು ದೂರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap