ನವದೆಹಲಿ:
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಮೊದಲ ಸಭೆ ನಡೆಯಿತು. ಪಿ. ಚಿದಂಬರಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಶಿ ತರೂರು ಮತ್ತಿತರ ಹಿರಿಯ ನಾಯಕರು ಪಾಲ್ಗೊಂಡರು.
ಸಭೆ ಬಳಿಕ ಮಾತನಾಡಿದ ಪಿ. ಚಿದಂಬರಂ, ಇದು ಪ್ರಣಾಳಿಕೆ ಸಮಿತಿಯ ಮೊದಲ ಸಭೆ. ಮುಂದಿನ ವಾರ ಮತ್ತೆ ಭೇಟಿಯಾಗಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಯಾವುದನ್ನೂ ನಿರ್ಧರಿಸಲಾಗಿಲ್ಲ. ಸಭೆಯಲ್ಲಿ ಪ್ರಾಥಮಿಕ ಆಲೋಚನೆಗಳು, ಚಿಂತನೆಗಳ ವಿನಿಮಯವಾಯಿತು ಹಾಗೂ ಪ್ರಣಾಳಿಕೆ ಕರಡನ್ನು ಹೇಗೆ ಸಿದ್ಧಪಡಿಸಬೇಕು ಎಂಬುದರ ಕುರಿತು ಚರ್ಚೆ ನಡೆಯಿತು ಎಂದು ತಿಳಿಸಿದರು.
ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತನಾಡಿ, ಏನೂ ನಿರ್ಧರವಾಗಿಲ್ಲ. ನಾವು ಅತ್ಯುತ್ತಮ ಪ್ರಣಾಳಿಕೆ ರೂಪಿಸುವ ವಿಶ್ವಾಸವಿದೆ. ಜನರು ಮಾತನಾಡುವ ಪ್ರಣಾಳಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ಸಭೆ ಜನವರಿ 11 ರಂದು ವರ್ಚುಯಲ್ ನಲ್ಲಿ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
