ಕೇಂದ್ರ ಬಜೆಟ್ : ರೈಲ್ವೇ ಇಲಾಖೆಗೆ 1,10,055 ಕೋಟಿ ರೂ. ಅನುದಾನ

ನವದೆಹಲಿ : 

     ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ತಮ್ಮ ಮೂರನೇ ಬಜೆಟ್‌ ಮಂಡನೆ ಮಾಡಿದ್ದು,  ರೈಲ್ವೇ ವ್ಯವಸ್ಥೆಯ ಅಭಿವೃದ್ಧಿಗೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. 

     ರೈಲ್ವೆಗಾಗಿ ₹ 1,10,055 ಕೋಟಿ ದಾಖಲೆಯ ಹಣ ನೀಡುತ್ತಿದ್ದೇನೆ. ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ ಬಿಡುಗಡೆ ಮಾಡಲಾಗಿದೆ. ಭಾರತೀಯ ರಾಷ್ಟ್ರೀಯ ರೈಲು ಯೋಜನೆ ಅಡಿಯಲ್ಲಿ 2030ರ ವೇಳೆಗೆ ಹಸಿರು ರೈಲ್ವೆ ಹಾಗೂ ಸಿದ್ದ ರೈಲ್ವೆ ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ತಮ್ಮ ಬಜೆಟ್​ ಮಂಡನೆ ವೇಳೆ ಹೇಳಿದ್ದಾರೆ.

     ದೇಶದಾದ್ಯಂತ 702 ಕಿಮೀಯಷ್ಟು ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ 1016 ಕಿಮೀ ದೂರದ ಮಾರ್ಗಗಳ ಕಾಮಗಾರಿಗಳು ನಡೆಯುತ್ತಿವೆ. ಟೈರ್ 2 ನಗರಗಳು ಮತ್ತು ಟೈರ್ 1 ನಗರಗಳ ಸುತ್ತಮುತ್ತಲು ಮೆಟ್ರೋಲೈಟ್ ಮತ್ತು ಮೆಟ್ರೊನಿಯೊ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ ಎಂದು ನಿರ್ಮಲಾ ಪ್ರಕಟಿಸಿದ್ದಾರೆ.

     ಅದಲ್ಲದೆ, ಟೈರ್​-2 ಹಾಗೂ 3 ಸಿಟಿಗಳಲ್ಲಿನ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link