ತುಮಕೂರು : ಕಸ ವಿಂಗಡಣೆಯಲ್ಲಿ ಪಾಲಿಕೆ ಬೇಜವಾಬ್ಧಾರಿತನ!!

ತುಮಕೂರು :   

     ನಗರದ ಚರ್ಚ್ ಸರ್ಕಲ್ ಬಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗುವ ದಾರಿಯಲ್ಲಿ ಮಹಾನಗರ ಪಾಲಿಕೆಯ ಕಾರ್ಮಿಕರು ಕಸ ವಿಂಗಡನೆ ಕೆಲಸ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

      ಕಸ ವಿಂಗಡನೆ ಮಾಡಲು  ಮಹಾನಗರ ಪಾಲಿಕೆಯಿಂದ ಇದಕ್ಕೆ ಪ್ರತ್ಯೇಕ ಜಾಗ ನಿಗದಿಯಾಗಿದೆ. ಆದರೂ ಸಹಾ ಪಾಲಿಕೆಯ ಕಾರ್ಮಿಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜಾಗದಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದು, ಜನರ ಆರೋಗ್ಯದ ಬಗ್ಗೆ ಪಾಲಿಕೆ ಬೇಜವಾಬ್ದಾರಿತನ ತೋರುತ್ತಿರುವುದು ಎದ್ದು ಕಾಣುತ್ತಿದೆ.

      ಅದಲ್ಲದೇ  ಮಹಾ ಮಾರಿ ಕೊರಾನ ವೈರಸ್ ವಿಶ್ವದಾದ್ಯಂತ ವ್ಯಾಪಿಸಿರುವ ಸಂದರ್ಭದಲ್ಲಿ ಸಾರ್ವಜಿಕರ ಹಿತ ಕಾಪಾಡಬೇಕಿರುವ ಪಾಲಿಕೆ ಕಸ ವಿಂಗಡಣೆಯಲ್ಲಿ ಈ ರೀತಿ ಬೇಜವಾಬ್ದಾರಿತನ ತೋರುತ್ತಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂಬ ಪ್ರಶ್ನೆ ಸಾ‍ರ್ವಜನಿಕರಲ್ಲಿ ಮೂಡುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link