ಕ್ರಿಕೆಟ್ ಲೋಕದ ಸ್ಪಿನ್ ಮಾಂತ್ರಿಕ, ವಿಶ್ವವಿಖ್ಯಾತ ಬೌಲರ್ ಶೇನ್ ವಾರ್ನ್ ವಿಧಿವಶರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್ಗೆ ಹೃದಯಾಘಾತವಾಗಿದೆ. ವಾರ್ನ್ ನಿಧನಕ್ಕೆ ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
145 ಟೆಸ್ಟ್ ಪಂದ್ಯಗಳನ್ನಾಡಿ ವಾರ್ನ್ 708 ವಿಕೆಟ್ ಪಡೆದಿದ್ದರು.
194 ಒನ್ ಡೇ ಮ್ಯಾಚ್ಗಳನ್ನು ಆಡಿದ್ದ ವಾರ್ನ್ 293 ವಿಕೆಟ್ ಬಾಚಿಕೊಂಡಿದ್ದರು. ಸಚಿನ್ ಬ್ಯಾಟಿಂಗ್ vs ವಾರ್ನ್ ಬೌಲಿಂಗ್ ಜಗತ್ತಿನ ಮನ ಗೆದ್ದಿತ್ತು. 2007ರಲ್ಲಿ ನಿವೃತ್ತಿಯಾಗಿದ್ದ ಶೇನ್ ವಾರ್ನ್ IPLನಲ್ಲಿ ರಾಜಸ್ತಾನ್ ರಾಯಲ್ಸ್ ಕ್ಯಾಪ್ಟನ್ ಆಗಿದ್ರು.
ವಾರ್ನ್ ನೇತೃತ್ವದಲ್ಲಿ RR ಚೊಚ್ಚಲ ಟ್ರೋಫಿ ಗೆದ್ದಿತ್ತು. ವಾರ್ನ್ ಸಾವಿಗೆ ವೀರೆಂದ್ರ ಶೆಹ್ವಾಗ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ವಾರ್ನ್ ಸಾವಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ