ಮೈಸೂರಲ್ಲಿ ನೂರರ ನಕಲಿ ನೋಟು ಚಲಾವಣೆಯಾಗ್ತಿದೆ ಹುಷಾರು!

ಮೈಸೂರು:ಮೈಸೂರಲ್ಲಿ ನೂರರ ನಕಲಿ ನೋಟು ಚಲಾವಣೆಯಾಗ್ತಿದೆ ಹುಷಾರು!

      ನಗರದ ಅಗ್ರಹಾರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 100 ರೂ. ಹಾಗೂ 50 ರೂ. ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿದೆ. ನಕಲಿ ನೋಟು ಕಂಡುಬಂದಾಗ ಪೊಲೀಸರ ಗಮನಕ್ಕೆ ತರಬೇಕಾದ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಜಾಗೃತಿ ಮೂಡಿಸುವ ಬದಲು ನೋಟುಗಳನ್ನು ಹರಿದು ಹಾಕುತ್ತಿರುವ ಆರೋಪವೂ ಕೇಳಿ ಬಂದಿದೆ.

 ಇದೀಗ ನಕಲಿ ನೋಟುಗಳ ಹಾವಳಿ ದಿನ ನಿತ್ಯದ ಸಮಸ್ಯೆಯಾಗಿದೆ. ಮಧ್ಯಮ ವರ್ಗ ಹಾಗೂ ಬಡವರನ್ನೇ ಗುರಿಯಾಗಿಸಿಕೊಳ್ಳುವ ಖದೀಮರು ನಕಲಿ ನೋಟುಗಳ ಚಲಾವಣೆಯನ್ನು ಎಗ್ಗಿಲ್ಲದೇ ಮಾಡುತ್ತಿದ್ದಾರೆ.

ನಗರದ ದೇವರಾಜ ಮಾರುಕಟ್ಟೆ, ಎಂಜಿ ರಸ್ತೆ, ಎಪಿಎಂಸಿಯ ತರಕಾರಿ ಮಾರುಕಟ್ಟೆ, ಹಣ್ಣು ಹಾಗೂ ಹೂವಿನ ಮಾರುಕಟ್ಟೆಯಲ್ಲಿೆುೀಂ ನಕಲಿ ನೋಟಿನ ಚಲಾವಣೆ ಹೆಚ್ಚಾಗುತ್ತಿದೆ. ವ್ಯಾಪಾರ ಮಾಡುವ ಭರದಲ್ಲಿ ವ್ಯಾಪಾರಸ್ಥರು ನೋಟಿನ ಅಸಲಿಯತ್ತನ್ನು ಪರೀಕ್ಷಿಸಲು ಹೋಗುತ್ತಿಲ್ಲ. ಹೀಗಾಗಿ ಖದೀಮರಿಗೆ ನೋಟು ಚಲಾವಣೆ ಸುಲಭವಾದಂತಾಗಿದೆ.

ಜವಾಬ್ದಾರಿ ಮೆರೆಯಲಿ ಬ್ಯಾಂಕ್ ಸಿಬ್ಬಂದಿ: ಸಾಲ ಪಾವತಿಸಲು ಅಥವಾ ಹಣವನ್ನು ಉಳಿತಾಯ ಖಾತೆಗೆ ಹಾಕಲು ಬರುವ ಮಧ್ಯಮ ವರ್ಗ ಹಾಗೂ ಬಡ ಜನತೆಗೆ ತಾವು ತಂದಿರುವುದು ನಕಲಿ ನೋಟು ಎಂಬುದು ಅಲ್ಲಿನ ಸಿಬ್ಬಂದಿಯಿಂದ ಗೊತ್ತಾಗುತ್ತಿದೆ.

ಕಾನೂನಿನ ಪ್ರಕಾರ ಯಾವುದೇ ಮೊತ್ತದ ನಕಲಿ ನೋಟು ಬ್ಯಾಂಕ್ ಕ್ಯಾಷಿಯರ್ ಬಳಿಗೆ ಯಾರಾದರೂ ತಂದಲ್ಲಿ ಅವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಬೇಕು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು.

ಆದರೆ, ಪೊಲೀಸರಿಗೆ ತಿಳಿಸಲು ಹೋದಲ್ಲಿ ನಮ್ಮ ಸಮಯ ವ್ಯರ್ಥ ಹಾಗೂ ಠಾಣೆಗೆ ಅಲೆದಾಡಬೇಕು ಎಂಬ ಕಾರಣಕ್ಕಾಗಿ ಹಣ ತಂದವರು ಹಿಂದೇಟು ಹಾಕುತ್ತಾರೆ.ಇದರಿಂದ ನಕಲಿ ನೋಟುಗಳನ್ನು ಹರಿದು ಹಾಕಲಾಗುತ್ತಿದೆ. ಈ ಕುರಿತು ಬ್ಯಾಂಕ್‌ನವರೇ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಕಲರ್ ಝೆರಾಕ್ಸ್

ನೂರು ರೂ. ಮೊತ್ತದ ನೋಟುಗಳು ಅಸಲಿಯಂತೆೆಯೇ ಕಾಣುತ್ತವೆ. ಅಸಲಿಗೂ, ನಕಲಿಗೂ ವ್ಯತ್ಯಾಸ ಕಾಣದಂತೆ ಅಸಲಿ ನೋಟುಗಳನ್ನು ಬಳಸಿ ಕಲರ್ ಝೆರಾಕ್ಸ್ ಮಾಡಿಸುವ ಖದೀಮರು ಅವುಗಳ ಚಲಾವಣೆಯನ್ನು ಸುಲಭವಾಗಿ ಮಾಡುತ್ತಿದ್ದಾರೆ. ಪೊಲೀಸರು ಇಂಥ ತಂಡಗಳ ಮೇಲೆ ನಿಗಾ ಇರಿಸಬೇಕು ಎನ್ನುವುದು ಗ್ರಾಹಕರ ಆಗ್ರಹ.

ಪತ್ರಿಕಾ ವಿತರಕರಿಗೂ ನಕಲಿ ನೋಟು

ಮುಂಜಾನೆ 5 ಗಂಟೆಗೆಎಲ್ಲಾ ಪತ್ರಿಕಾ ವಿತರಕರು ತಮ್ಮ ವ್ಯವಹಾರ ಆರಂಭಿಸುತ್ತಾರೆ. ಕತ್ತಲಿನಲ್ಲಿ ಪತ್ರಿಕೆ ಮಾರಾಟ ಹಾಗೂ ಹಣಕಾಸು ವ್ಯವಹಾರ ನಡೆಯುತ್ತದೆ. ಅಲ್ಲಿ ಕೂಡ ಸಾಕಷ್ಟು ಮಂದಿ ನಕಲಿ ನೋಟುಗಳನ್ನು ಚಲಾವಣೆ ಮಾಡಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap