ಗ್ರಾಮೀಣ ಜನತೆಗೆ ಕೇಂದ್ರದಿಂದ ಸಿಹಿಸುದ್ದಿ

ನವದೆಹಲಿ :

    ಕೇವಲ 50 ರೂಪಾಯಿಗಳಲ್ಲಿ 5 `LED’ ಬಲ್ಬ್‌ ವಿತರಣೆ

   ಗ್ರಾಮ ಉಜಾಲ ಯೋಜನೆಯಡಿ ಕೇಂದ್ರ ಸರಕಾರ ಕೇವಲ 10 ರೂ.ಗೆ ಒಂದು ಎಲ್‌ಇಡಿ ಬಲ್ಬ್(LED Bulb) ನೀಡುತ್ತಿದೆ. ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಎಲ್‌ಇಡಿ ಬಲ್ಬ್ʼಗಳನ್ನ ವಿತರಿಸಲಾಗಿದೆ.

           ವಾಸ್ತವವಾಗಿ, ಸರ್ಕಾರಿ ಕಂಪನಿ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(Convergence Energy Services Limited) ಅಂದ್ರೆ CESL, ಗ್ರಾಮ ಉಜಾಲಾ ಯೋಜನೆ ಅಡಿಯಲ್ಲಿ 50 ಲಕ್ಷ ಎಲ್‌ಇಡಿ ಬಲ್ಬ್ಗಳನ್ನ ವಿತರಿಸುವ ಮಹತ್ವದ ಸಾಧನೆಯನ್ನ ಸಾಧಿಸಿದೆ.

          ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಸಿಇಎಸ್‌ಎಲ್(CESL) ಈ ಸಾಧನೆ ಮಾಡಿದೆ ಎಂದು ವಿದ್ಯುತ್ ಸಚಿವಾಲಯ ಮಂಗಳವಾರ ತಿಳಿಸಿದೆ.

ಅದ್ರಂತೆ, ಗ್ರಾಮ ಉಜಾಲ ಯೋಜನೆಯನ್ನು ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಗ್ರಾಮೀಣ ಮನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಯೋಜನೆ..!

CESL ಈ ವರ್ಷದ ಮಾರ್ಚ್‌ನಲ್ಲಿ ಹಳ್ಳಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನ ಕೈಗೆಟುಕುವ ಬೆಲೆಯಲ್ಲಿ ಅಂದ್ರೆ ರೂ 10 ವಿತರಿಸಲು ಯೋಜನೆಯನ್ನ ಪ್ರಾರಂಭಿಸಿತು. ಈ ತಿಂಗಳು, ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, 2021 ರ ಸಂದರ್ಭದಲ್ಲಿ, ಒಂದೇ ದಿನದಲ್ಲಿ 1 ಮಿಲಿಯನ್ ಎಲ್‌ಇಡಿ ಬಲ್ಬ್‌ಗಳನ್ನ ವಿತರಿಸುವ ಪ್ರಮುಖ ಗುರಿಯನ್ನ CESL ಸಾಧಿಸಿದೆ.

ಗ್ರಾಮ ಉಜಾಲಾ ಯೋಜನೆ ಎಂದರೇನು?

CESL ಸಾಂಪ್ರದಾಯಿಕ ಬಲ್ಬ್‌ಗಳ ಬದಲಿಗೆ ಪ್ರತಿ ಬಲ್ಬ್‌ಗೆ ರೂ.10 ದರದಲ್ಲಿ 3 ವರ್ಷಗಳ ಗ್ಯಾರಂಟಿಯೊಂದಿಗೆ ಉತ್ತಮ ಗುಣಮಟ್ಟದ 7W ಮತ್ತು 12W LED ಬಲ್ಬ್‌ಗಳನ್ನ ಒದಗಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಕುಟುಂಬವು ಗರಿಷ್ಠ 5 ಬಲ್ಬ್‌ಗಳನ್ನು ಪಡೆಯಬಹುದು.

ವಾರ್ಷಿಕ 250 ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಈ ಮೂಲಕ ಸದರಿ ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆ 71 ಕೋಟಿಗೂ ಹೆಚ್ಚು ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು 250 ಕೋಟಿ ವೆಚ್ಚದ ರೂಪದಲ್ಲಿ ಉಳಿತಾಯವಾಗಲಿದೆ. ಈ ಕಾರ್ಯಕ್ರಮವು ಮಾರ್ಚ್ 31, 2022 ರವರೆಗೆ ಇರುತ್ತದೆ.

ಸಿಇಎಸ್‌ಎಲ್‌ನ ಎಂಡಿ ಮತ್ತು ಸಿಇಒ ಮಹುವಾ ಆಚಾರ್ಯ, ‘ಗ್ರಾಮೀಣ ಪರಿಸರದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕಾರ್ಬನ್ ಕ್ರೆಡಿಟ್‌ನ ಆರ್ಥಿಕ ಮಾದರಿಯಲ್ಲಿ ಕೆಲಸ ಮಾಡುತ್ತಾ, ನಾವು ಯೋಜನೆ ಕೋಟಿಯನ್ನ ಪೂರ್ಣಗೊಳಿಸಿದ ನಂತ್ರ ಇತರ ರಾಜ್ಯಗಳ ಹಳ್ಳಿಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸುತ್ತೇವೆ’ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap