ಎಲ್ಲಿಂದ ಕಣಕ್ಕಿಳಿಯಲಿದ್ದಾರೆ ಪ್ರಿಯಾಂಕ ಗಾಂಧಿ…!

ಹೈದರಾಬಾದ್: 

              ಕಾಂಗ್ರೆಸ್ ಹೈಕಮಾಂಡ್ ಪ್ರಿಯಾಂಕಾ ಗಾಂಧಿ ಉಮೇದುವಾರಿಕೆಯನ್ನು ಅಂತಿಮಗೊಳಿಸಿದರೆ, ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಲಿದ್ದಾರೆ. ಈ ಮೂಲಕ 1980 ರಲ್ಲಿ ಮೆದಕ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಜ್ಜಿ ಇಂದಿರಾ ಗಾಂಧಿಯವರ ಹಾದಿಯಲ್ಲಿ ಪ್ರಿಯಾಂಕಾ ಸಾಗಲಿದ್ದಾರೆ. ತುರ್ತು ಪರಿಸ್ಥಿತಿಯ ನಂತರ ನಡೆದ 1980ರ ಲೋಕಸಭೆ ಚುನಾವಣೆ ಇಂದಿರಾ ಗಾಂಧಿ ಅವರಿಗೆ ಅತ್ಯಂತ ನಿರ್ಣಾಯಕವಾಗಿತ್ತು.

      ಅಜ್ಜಿ ಸ್ಪರ್ಧಿಸಿದ್ದ ಕ್ಷೇತ್ರ ಎಂಬ ಕಾರಣಕ್ಕೆ ಪ್ರಿಯಾಂಕಾ ಅವರು ಮೇದಕ್‌ನಿಂದ ಸ್ಪರ್ಧಿಸುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. “ಜನರು ಇಂದಿರಾ ಗಾಂಧಿಯ ಬಗ್ಗೆ ಒಲವು ಹೊಂದಿದ್ದರು ಮತ್ತು ಅವರು ಮರಳಿ ಅಧಿಕಾರ ಪಡೆಯಲು ಸಹಾಯ ಮಾಡಿದರು. ಪ್ರಿಯಾಂಕಾಗೆ ನಿಕಟವಾಗಿರುವ ಕೆಲವು ಪ್ರಮುಖ ನಾಯಕರು ಮೇದಕ್‌ನಿಂದ ಸ್ಪರ್ಧಿಸುವ ಬಗ್ಗೆ ಹಲವಾರು ಬಾರಿ ಅವರೊಂದಿಗೆ ಚರ್ಚಿಸಿದ್ದಾರೆ” ಎಂದು ಪಕ್ಷದ ಉನ್ನತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿವೆ.

       ಕಾಂಗ್ರೆಸ್ ಹೈಕಮಾಂಡ್ ಪ್ರಿಯಾಂಕಾ ಗಾಂಧಿಗಾಗಿ ಮಹೆಬೂಬ್‌ನಗರವನ್ನು ಸಹ ಪರಿಗಣಿಸುತ್ತಿದೆ. ಬಿಆರ್‌ಎಸ್ ವರಿಷ್ಠ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು 2009 ರಲ್ಲಿ ಮಹಬೂಬ್‌ನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತರುವಾಯ, ಅವರು ಲೋಕಸಭೆಗೆ ರಾಜೀನಾಮೆ ನೀಡಿದರು. ನಂತರ ಬಿಆರ್ ಎಸ್ ನಾಯಕ ಕೆ ಪ್ರಭಾಕರ ರೆಡ್ಡಿ ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಮೇದಕ್‌ನಿಂದ ಚುನಾಯಿತರಾದರು ಮತ್ತು ನಂತರ 2019 ರಲ್ಲೂ ಮರು ಆಯ್ಕೆಯಾದರು.

        2024ರ ಸಾರ್ವತ್ರಿಕ ಚುನಾವಣೆಗೆ ಕೆಲವು ತಿಂಗಳುಗಳ ಮುನ್ನ ಅಂದರೆ ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ಎದುರಿಸಲಿದೆ. ಈ ವಿಧಾನಸಭೆ ಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap