ಸ್ಯಾಂಡಲ್‌ ವುಡ್‌ ಖ್ಯಾತ ಸಿನಿಮಾ ನಿರ್ದೇಶಕ ಗಜನ ಬಂಧನ

ಬೆಂಗಳೂರು:

   ಕೊಲೆ ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಡಲ್‌ ವುಡ್‌ ಖ್ಯಾತ ಸಿನಿಮಾ ನಿರ್ದೇಶಕನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಗಜೇಂದ್ರ ಅಲಿಯಾಸ್‌ ಗಜನನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

   ಗಜೇಂದ್ರ ಈ ಹಿಂದೆ ಕನ್ನಡದಲ್ಲಿ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಸದ್ಯ ಸಿಸಿಬಿ ಪೊಲೀಸರು ಗಜೇಂದ್ರನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

   2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೊಲೆ ಕೇಸ್​​ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ ಎಂಟನೇ ಆರೋಪಿಯಾಗಿದ್ದ. ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಹಲವು ವರ್ಷಗಳಿಂದ ಕೋರ್ಟ್​ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಇದೀಗ 20 ವರ್ಷಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap