ಮುಂಬಯಿ:
ಭಾರತದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈಯ ಸ್ಥಳೀಯ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಹೆಸರನ್ನು ಜಪಿಸುವುದನ್ನು ನಿಲ್ಲಿಸುವಂತೆ ಅಭಿಮಾನಿಗಳನ್ನು ಮನವಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ನಂತರ ರೋಹಿತ್ ದೀರ್ಘ ವಿರಾಮದಲ್ಲಿದ್ದಾರೆ. ಮತ್ತು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತೆ ಆಟಕ್ಕೆ ಮರಳಲಿದ್ದಾರೆ.
ದೇವಾಲಯದಲ್ಲಿ ರೋಹಿತ್ ಅವರನ್ನು ನೋಡಿದ ಉತ್ಸಾಹಭರಿತ ಜನಸಮೂಹವು ಅವರ ಹೆಸರನ್ನು ಜಪಿಸುತ್ತಾ, ಅವರನ್ನು ‘ಮುಂಬೈ ಚಾ ರಾಜ ‘ ಎಂದು ತಮ್ಮ ಎಂದಿನ ಶೈಲಿಯಲ್ಲಿ ಕೂಗಲು ಆರಂಭಿಸಿದರು. ತಕ್ಷಣವೇ ರೋಹಿತ್ ಇದು ದೇವಸ್ಥಾನ ಇಲ್ಲಿ ಈ ರೀತಿ ಮಾಡದಂತೆ ಕಕೈ ಸನ್ನೆಯ ಮೂಲಕ ತಿಳಿಸಿದರು. ತಕ್ಷಣ ಅಭಿಮಾನಿಗಳು ಕೂಡ ಇದಕ್ಕೆ ಸ್ಫಂದಿಸಿದ್ದಾರೆ.
ಏತನ್ಮಧ್ಯೆ, ರೋಹಿತ್ ಅವರ ಹೊಸ ಲುಕ್ ಕೂಡ ಗಮನಸೆಳೆದಿದೆ. ಕರ್ಲಿ ಹೇರ್ಸ್ಟೈಲ್ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. 38 ವರ್ಷದ ರೋಹಿತ್ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ನಡೆಸಲಾದ ಪೂರ್ವ-ಋತುವಿನ ಫಿಟ್ನೆಸ್ ಪರೀಕ್ಷೆಯಲ್ಲಿ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ಜಿತೇಶ್ ಶರ್ಮಾ ಅವರೊಂದಿಗೆ ರೋಹಿತ್ ಕೂಡ ಫಿಟ್ನೆಸ್ ಪರೀಕ್ಷೆ ನಡೆಸಿ ಉತ್ತೀರ್ಣರಾಗಿದ್ದರು.
